ಹೆಚ್ಚು ಜೀವನಾಂಶ ಪಡೆದವರು ಯಾರು ಗೊತ್ತಾ? ಇವು ಪ್ರಪಂಚದ 5 ದುಬಾರಿ ಡಿವೋರ್ಸ್‌ಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಿನ ಸಮಾಜದಲ್ಲಿ ಮದುವೆಯಾಗಿ ವಿಚ್ಛೇದನ ಪಡೆಯೋದು ತುಂಬಾ ಮಾಮೂಲಿಯಾಗಿ ಬಿಟ್ಟಿದೆ. ಇತ್ತೀಚೆಗಷ್ಟೇ ಕ್ರಿಕೆಟರ್ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾರ ಡೈವೋರ್ಸ್ ಆಗಿದ್ದು ಎಲ್ಲರಿಗು ಗೊತ್ತೇ ಇದೆ. ಆದರೆ ಪ್ರಪಂಚದ 5 ದುಬಾರಿ ವಿಚ್ಛೇದನಗಳು ಯಾವುದು ಅಂತ ನಿಮಗೆ ಗೊತ್ತಿದೆಯಾ?

ಬಿಲ್ ಗೇಟ್ಸ್ – ಮೆಲಿಂಡಾ ಗೇಟ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ 27 ವರ್ಷಗಳ ದಾಂಪತ್ಯ ಜೀವನಕ್ಕೆ 2021ರಲ್ಲಿ ಅಂತ್ಯ ಹಾಡಿದರು. ಮೆಲಿಂಡಾ 73 ಬಿಲಿಯನ್ ಡಾಲರ್ ಜೀವನಾಂಶದೊಂದಿಗೆ 6.3 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯ ಷೇರುಗಳನ್ನು ಪಡೆದರು.

ಅಲೆಕ್ ವೈಲ್ಡ್‌ಸ್ಟೈನ್ – ಜೋಸ್ಲಿನ್ ವೈಲ್ಡ್‌ಸ್ಟೈನ್

ಫ್ರೆಂಚ್-ಅಮೆರಿಕನ್ ಉದ್ಯಮಿ ಅಲೆಕ್ ವೈಲ್ಡ್‌ಸ್ಟೈನ್ ಮತ್ತು ಅವರ ಪತ್ನಿ ಜೋಸ್ಲಿನ್ ವೈಲ್ಡ್‌ಸ್ಟೈನ್ 1999ರಲ್ಲಿ 21 ವರ್ಷಗಳ ದಾಂಪತ್ಯ ಜೀವನವನ್ನು ಗೊನೆಗೊಳಿಸಿದರು. ಈ ವಿಚ್ಛೇದನದಲ್ಲಿ ಜೋಸ್ಲಿನ್ 3.8 ಬಿಲಿಯನ್ ಡಾಲರ್ ಜೀವನಾಂಶ ಪಡೆದರು.

ಜೆಫ್ ಬೆಜೋಸ್ – ಮೆಕೆಂಜಿ ಸ್ಕಾಟ್

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಪತ್ನಿ ಮೆಕೆಂಜಿ ಸ್ಕಾಟ್ 2019ರಲ್ಲಿ ವಿಚ್ಛೇದನ ಪಡೆದರು. ಮೆಕೆಂಜಿ ಅಮೆಜಾನ್‌ನ 4% ಷೇರುಗಳನ್ನು ಪಡೆದರು, ಇದರ ಮೌಲ್ಯ 38 ಬಿಲಿಯನ್ ಡಾಲರ್.

ರೂಪರ್ಟ್ ಮರ್ಡೋಕ್ – ಮಾರಿಯಾ ಟೋರ್ವ್

ಆಸ್ಟ್ರೇಲಿಯನ್-ಅಮೆರಿಕನ್ ಉದ್ಯಮಿ ರೂಪರ್ಟ್ ಮರ್ಡೋಕ್ 31 ವರ್ಷಗಳ ದಾಂಪತ್ಯದ ನಂತರ 1998ರಲ್ಲಿ ಮಾರಿಯಾ ಟೋರ್ವ್‌ಗೆ ವಿಚ್ಛೇದನ ನೀಡಿದರು. ಮಾರಿಯಾ 1.7 ಬಿಲಿಯನ್ ಡಾಲರ್ ಜೀವನಾಂಶ ಪಡೆದರು.

ಬರ್ನಿ ಎಕ್ಲೆಸ್ಟೋನ್ – ಸ್ಲಾವಿಕಾ ರಾಡಿಕ್

ಫಾರ್ಮುಲಾ ಒನ್‌ನ ಮಾಜಿ ಮುಖ್ಯಸ್ಥ ಮತ್ತು ಬ್ರಿಟನ್‌ನ ಶ್ರೀಮಂತ ವ್ಯಕ್ತಿ ಬರ್ನಿ ಎಕ್ಲೆಸ್ಟೋನ್ ತಮ್ಮ ವಿಚ್ಛೇದನದಲ್ಲಿ ಕ್ರೊವೇಷಿಯಾದ ಮಾಡೆಲ್ ಸ್ಲಾವಿಕಾ ರಾಡಿಕ್‌ಗೆ 1.2 ಬಿಲಿಯನ್ ಡಾಲರ್ ಜೀವನಾಂಶ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!