ಬಾಹ್ಯಾಕಾಶದಲ್ಲಿ ಅರಳಿದ ಹೂ! ನಾಸಾ ಹಂಚಿಕೊಂಡ ಫೋಟೋದ ರಹಸ್ಯ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿಗೆ ಹೊಸ ಸಂಶೋಧನೆ ಪರಿಚಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ನಾಸಾ, ಹಿಂದೊಮ್ಮೆ ಬಾಹ್ಯಾಕಾಶದಲ್ಲಿ ಹೂ ಅರಳಿದ್ದ ಚಿತ್ರವನ್ನು ಪ್ರಕಟಿಸಿತ್ತು. 2016ರಲ್ಲಿ ಪ್ರಕಟ ಮಾಡಿದ್ದ ಒಂದು ಚಿತ್ರ ಇದೀಗ ಮತ್ತೆ ಚರ್ಚೆಗೆ ಬಂದಿದೆ.

ನಾಸಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿತ್ತು. ಈ ಫೋಟೋ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಆರೆಂಜ್ ಜಿನ್ನಿಯಾ ಹೂವಿನದ್ದಾಗಿತ್ತು. ಹೂವಿನ ಹಿನ್ನಲೆಯಲ್ಲಿ ಭೂಮಿಯನ್ನು ಕಾಣಬಹುದಾಗಿತ್ತು. ಈ ಹೂವಿನ ಬೆಳವಣಿಗೆಯು VEG-01 ಪ್ರಯೋಗದ ಒಂದು ಭಾಗವಾಗಿದೆ ಎಂದು ನಾಸಾ ತಿಳಿಸಿತ್ತು.

ವಿಜ್ಞಾನಿಗಳು 1970 ರ ದಶಕದಿಂದಲೂ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಈ ನಿರ್ದಿಷ್ಟ ಪ್ರಯೋಗವನ್ನು 2015 ರಲ್ಲಿ ನಾಸಾ ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!