ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರುತ್ತಿರುವ ಜನಸಂಖ್ಯೆ ಮತ್ತು ಅಗಾಧ ಕೈಗಾರಿಕೆಗಳಿಗೆ ಅವಶ್ಯಕವಾದ ವಿದ್ಯುತ್ ಅನ್ನು ಪೂರೈಸಲು ಕಲ್ಲಿದ್ದಲು ಅಗ್ಗದ ಆಯ್ಕೆ. ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ.
ಈಗ ಮೊದಲ ಬಾರಿಗೆ ಕಲ್ಲಿದ್ದಲು ಉತ್ಪಾದನೆ ಒಂದು ಬಿಲಿಯನ್ ಟನ್ ಮೈಲಿಗಲ್ಲು ಮುಟ್ಟಿದೆ. ಚೀನಾ ಬಿಟ್ಟರೆ ಬೇರೆ ಯಾವ ದೇಶವೂ ಕೂಡ ಈ ಮೈಲಿಗಲ್ಲು ತಲುಪಿಲ್ಲ. ಭಾರತ ಕಳೆದ 10 ವರ್ಷಗಳಿಂದ ಕಲ್ಲಿದ್ದಲು ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿದೆ.