ಜಗತ್ತಿನಲ್ಲಿ ಅತ್ಯಂತ ಖುಷಿಯಾಗಿರೋ ದೇಶ ಯಾವುದು ಗೊತ್ತಾ? ಭಾರತಕ್ಕೆ ಎಷ್ಟನೇ ಸ್ಥಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

2025ನೇ ಸಾಲಿನ ಹೆಚ್ಚು ಸಂತೃಪ್ತಿ ಹೊಂದಿರುವ ದೇಶಗಳ ಜಾಗತಿಕ ವರದಿ ಪ್ರಕಟಗೊಂಡಿದ್ದು, ಭಾರತ 118ನೇ ಸ್ಥಾನದಲ್ಲಿದೆ. ಕಳೆದ ವರ್ಷ 126ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 8 ಸ್ಥಾನ ಸುಧಾರಣೆ ಕಂಡಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವೆಲ್‌ಬೀಯಿಂಗ್ ಸಂಶೋಧನಾ ಕೇಂದ್ರ ಹಾಗೂ ‘ಗ್ಯಾಲಪ್’ ಈ ವಾರ್ಷಿಕ ವರದಿ ತಯಾರಿಸಿವೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲವು 2022ರಿಂದ 2024ರ ಅವಧಿಯಲ್ಲಿ ಜೀವನದ ಸ್ವಯಂಮೌಲ್ಯಮಾಪನ ಆಧರಿಸಿ ರ‍್ಯಾಂಕ್ ನೀಡಿದೆ.

ಭಾರತದ ನೆರೆರಾಷ್ಟ್ರ ಅಫ್ಘಾನಿಸ್ತಾನವು (147) ಈ ಸಲವೂ ಕೊನೆಯ ಸ್ಥಾನದಲ್ಲಿದೆ. ನೇಪಾಳ 92, ಪಾಕಿಸ್ತಾನ 109, ಶ್ರೀಲಂಕಾ 133, ಬಾಂಗ್ಲಾದೇಶ 134ನೇ ಸ್ಥಾನದಲ್ಲಿವೆ. ಈ ವರ್ಷ ಚೀನಾವು 68ನೇ ಸ್ಥಾನಕ್ಕೇರಿದೆ. ಪ್ಯಾಲೆಸ್ಟೀನ್ 108, ಉಕ್ರೇನ್ 111ನೇ ಸ್ಥಾನ ಪಡೆದಿವೆ.

ಟಾಪ್ 5 ದೇಶಗಳು ಇವು
ಫಿನ್ಲೆಂಡ್, ಡೆನ್ಮಾರ್ಕ್, ಐಸ್ ಲ್ಯಾಂಡ್, ಸ್ವೀಡನ್, ನೆದರ್ ಲ್ಯಾಂಡ್ ಹೆಚ್ಚು ಸಂತೃಪ್ತಿ ಹೊಂದಿರುವ ದೇಶಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!