ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಸಿನಿಮಾ ಟಾಕ್ಸಿಕ್‌ನಲ್ಲಿ ಕಿಯಾರಾ ಅಡ್ವಾಣಿ ಆಕ್ಟಿಂಗ್ ಮಾಡ್ತಿದ್ದಾರೆ. ಇದೇ ಮೊದಲ ಬಾರಿಗೆ ಕಿಯಾರಾ ಕನ್ನಡ ಸಿನಿಮಾದಲ್ಲಿ ಅಭಿನಯ ಮಾಡ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಫಿಲಂ ಎಂದು ಕಿಯಾರಾ ಆಫರ್ ಅಕ್ಸೆಪ್ಟ್ ಮಾಡಿದ್ದು, ಸಿಕ್ಕಾಪಟ್ಟೆ ಹಣ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ನಟಿ ಕಿಯಾರಾ ಟಾಕ್ಸಿಕ್‌ಗಾಗಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಇದು ಬಹುದೊಡ್ಡ ಅಮೌಂಟ್ ಆಗಿದ್ದು, ಕಿಯಾರಾ ನಟನೆಗಾಗಿ ಜನ ಎದುರು ನೋಡುತ್ತಿದ್ದಾರೆ. ಈವರೆಗೂ ಸೌತ್‌ನಲ್ಲಿ ಯಾವೊಬ್ಬ ಹೀರೋಯಿನ್ ಇಷ್ಟೊಂದು ಹಣ ಪಡೆದಿಲ್ಲ ಎನ್ನಲಾಗಿದೆ.
ಆದರೆ ಕಲ್ಕಿ ಸಿನಿಮಾಗಾಗಿ ನಟಿ ದೀಪಿಕಾ ಪಡುಕೋಣೆ 23 ಕೋಟಿ ರೂ. ಪಡೆದಿದ್ದರು ಎಂದು ಹೇಳಲಾಗಿದೆ.