ಸಾಮಾಗ್ರಿಗಳು
ಆಲೂಗಡ್ಡೆ
ಮೆಣಸು ಕಾಳಿನ ಪುಡಿ
ಕಾರ್ನ್ಫ್ಲೋರ್
ಅಚ್ಚಖಾರದಪುಡಿ
ಕೊತಂಬರಿಸೊಪ್ಪು
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರ್ನಲ್ಲಿ ಹಾಕಿ 3 ವಿಸಿಲ್ ಬೇಯಿಸಿಕೊಳ್ಳಬೇಕು. ನಂತರ ಬೆಂದಿರುವ ಆಲೂಗಡ್ಡೆಯನ್ನು ಸ್ಮಾಶ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಚು ಉಪ್ಪು, ಅರ್ಧ ಟೀ ಸ್ಪೂನ್ ಮೆಣಸಿನಪುಡಿ, ಸಣ್ಣದಾಗಿ ಹಚ್ಚಿರುವ ಕೊತಂಬರಿ ಸೊಪ್ಪು, 2 ಟೀ ಸ್ಪೂನ್ ಕಾರ್ನ್ಫ್ಲೋರ್, 1 ಟೀ ಸ್ಪೂನ್ ಅಚ್ಚಖಾರದಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಈ ಮಿಶ್ರಣವನ್ನು ಒಂದು ಕವರ್ನಲ್ಲಿ ಹಾಕಿಕೊಂಡು ಕೋನ್ ತರ ಮಾಡಿಕೊಳ್ಳಬೇಕು. ಒಂದು ತಟ್ಟೆಗೆ ಸ್ವಲ್ಪ ಎಣ್ಣೆ ಸವರಿಕೊಂಡು ಕೋನ್ ಕವರ್ನಲ್ಲಿರುವ ಆಲೂ ಮಿಶ್ರಿತ ಹಿಟ್ಟನ್ನು ಪ್ರೆಸ್ ಮಾಡಿ ನಿಮಗೆ ಸ್ಟಿಕ್ಸ್ ಎಷ್ಟು ಉದ್ದ ಬೇಕೋ ಅಷ್ಟಕ್ಕೆ ಪ್ರೆಸ್ ಮಾಡಿಟ್ಟುಕೊಳ್ಳಿ.
ನಂತರ ಸ್ಟೌವ್ ಮೇಲೆ ಬಾಣಲಿ ಇಟ್ಟು, ಕರಿಯಲು ಬೇಕಾದಷ್ಟು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ ಈ ಆಲೂ ಸ್ಟಿಕ್ಸ್ಅನ್ನು ಎಣ್ಣೆಯಲ್ಲಿ ಒಂದೊಂದೇ ನಿಧಾನವಾಗಿ ಬಿಡಬೇಕು. ಆಲೂ ಸ್ಟಿಕ್ಸ್ನ್ನು ಮೀಡಿಯಂ ಫ್ಲೇಮ್ನಲ್ಲಿ ಫ್ರೈ ಮಾಡಿ, ಆಲೂ ಸ್ಟಿಕ್ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಫ್ರೈ ಮಾಡಿ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿದ್ರೆ ಆಲೂ ಸ್ಟಿಕ್ಸ್ ರೆಡಿ. ಬೇಕಿದ್ದರೆ ಇದಕ್ಕೆ ಪೆರಿಪೆರಿ ಮಸಾಲಾ ಅಥವಾ ಆರಿಗ್ಯಾನೊ ಕೂಡ ಹಾಕಬಹುದು.