ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ಟೂರ್ನಿ ಇಂದು ಆರಂಭವಾಗಲಿದ್ದು, ಗೂಗಲ್ ಕೂಡ ಈ ಅದ್ಧೂರಿ ಕ್ರಿಕೆಟ್ ಈವೆಂಟ್ ಅನ್ನು ಆಚರಿಸುತ್ತಿದೆ. ಗೂಗಲ್ ವಿಶೇಷ ಡೂಡಲ್ ಮೂಲಕ, ಐಪಿಎಲ್ ಉದ್ಘಾಟನೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದೆ.
ಗೂಗಲ್‌ನ ಡೂಡಲ್‌ನಲ್ಲಿ ಬ್ಯಾಟ್ಸ್‌ಮನ್ ಚೆಂಡನ್ನು ಹೊಡೆಯುವುದನ್ನು ತೋರಿಸಲಾಗಿದೆ. ಶಾಟ್ ಹೊಡೆದ ತಕ್ಷಣ, ಅಂಪೈರ್ ತನ್ನ ಕೈಯನ್ನು ಮೇಲಕ್ಕೆತ್ತಿ ಫೋರ್ ಎಂದು ಸೂಚಿಸುತ್ತಾರೆ.
ಡೂಡಲ್ ಮೇಲೆ ಕ್ಲಿಕ್ ಮಾಡುವುದರಿಂದ ಪಂದ್ಯದ ವೇಳಾಪಟ್ಟಿ, ತಂಡದ ಲೈನ್-ಅಪ್‌ಗಳು ಮತ್ತು ಸಮಯ ಸೇರಿದಂತೆ ಎಲ್ಲಾ ಐಪಿಎಲ್ ವಿವರಗಳು ತೆರೆದುಕೊಳ್ಳುತ್ತದೆ. ಮುಂದೆ ನಡೆಯಲಿರುವ ಪಂದ್ಯ ಸೇರಿದಂತೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿದೆ.