SHOCKING | ವಿಡಿಯೋ ನೋಡುತ್ತಾ ಹೊಟ್ಟೆ ಕೊಯ್ದುಕೊಂಡು ಆಪರೇಷನ್‌ ಮಾಡಿಕೊಂಡ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಪೆಂಡಿಕ್ಸ್​ನಿಂದ ಬಳಲುತ್ತಿದ್ದ ಯುವಕನೊಬ್ಬ ಯುಟ್ಯೂಬ್ ವಿಡಿಯೋ ನೋಡಿ ಹೊಟ್ಟೆಯನ್ನು ಕೊಯ್ದುಕೊಂಡು ಸ್ವತಃ ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾನೆ.

ಉತ್ತರ ಪ್ರದೇಶದ ವೃಂದಾವನದ 32 ವರ್ಷದ ರಾಜಾ ಬಾಬು ಎಂಬಾತ ಸ್ವತಃ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹೋಗಿ ಈಗ ಆಸ್ಪತ್ರೆಗೆ ಸೇರಿದ್ದಾರೆ. ರಾಜಾ ಬಾಬುಗೆ 14ನೇ ವಯಸ್ಸಿನಲ್ಲೇ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಆಗಿತ್ತು. ಆದರೂ ಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಈಗಲೂ ಕೂಡ ರಾಜಾ ಬಾಬು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಬಾರಿ ವೈದ್ಯರನ್ನು ಸಂಪರ್ಕಿಸಿದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಇದರಿಂದಾಗಿ ತಾವೇ ಸ್ವತಃ ಆಪರೇಷನ್ ಮಾಡಿಕೊಳ್ಳಲು ಮುಂದಾಗಿದ್ದರು.

ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಮಥುರಾಗೆ ಹೋಗಿ ಶಸ್ತ್ರಚಿಕಿತ್ಸಾ ಬ್ಲೇಡ್‌ಗಳು, ಹೊಲಿಗೆ ಉಪಕರಣಗಳು ಮತ್ತು ಅನಸ್ತೇಸಿಯಾ ಇಂಜೆಕ್ಷನ್‌ಗಳನ್ನು ತಂದಿದ್ದೆ. ಬುಧವಾರ ಬೆಳಗ್ಗೆ ತಮ್ಮ ಮನೆಯ ಕೋಣೆಯೊಂದರಲ್ಲಿ ಕುಳಿತು ಹೊಟ್ಟೆ ನೋವಿನ ಸ್ಥಳದಲ್ಲಿ ಏಳು ಸೆಂಟಿಮೀಟರ್​ನಷ್ಟು ಹೊಟ್ಟೆಯನ್ನು ಕೊರೆದುಕೊಂಡೆ. ನಂತರ, ಒಳಗಡೆ ಏನಾಗಿದೆ ಎಂದು ಹೊಟ್ಟೆಯೊಳಗೆ ಕೈ ಹಾಕಲು ಯತ್ನಿಸಿದೆ. ಆಗ ಏನೂ ಗೊತ್ತಾಗದಿದ್ದಾಗ ಸೂಜಿ ಮತ್ತು ದಾರದಿಂದ ತನ್ನ ಹೊಟ್ಟೆಯನ್ನು ಹೊಲಿದುಕೊಂಡೆ. ಸ್ವಲ್ಪ ಸಮಯದ ನಂತರ, ಇಂಜೆಕ್ಷನ್‌ನ ಪರಿಣಾಮ ಕಡಿಮೆಯಾಗಿ ನೋವು ಹೆಚ್ಚಾಗಲು ಪ್ರಾರಂಭಿಸಿದ್ದರಿಂದ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದೆ. ಬಳಿಕ ಅವರು ನನ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ರಾಜಾ ಬಾಬು ಘಟನೆ ಕುರಿತು ವಿವರಿಸಿದ್ದಾರೆ.

ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿ ರಾಜಾ ಬಾಬು ಆಪರೇಷನ್ ಮಾಡಿಕೊಳ್ಳಲು ಮುಂದಾಗಿದ್ದ. ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಾದ ಜಾಗದಲ್ಲಿ ಅನಸ್ತೇಸಿಯಾ ಇಂಜೆಕ್ಷನ್​ ಚುಚ್ಚಿಕೊಂಡಿದ್ದ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!