ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ಪಡೆ ವಿರುದ್ಧ ಆರ್ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ.
175 ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಪರ ಸಾಲ್ಟ್ ಮತ್ತು ಕೊಹ್ಲಿ ಮೊದಲ 6 ಓವರ್ಗಳಲ್ಲಿ 80 ರನ್ ಕಲೆಹಾಕಿದರು. ಇಬ್ಬರೂ ಕೇವಲ 8.3 ಓವರ್ಗಳಲ್ಲಿ 95 ರನ್ಗಳ ಆರಂಭಿಕ ಪಾಲುದಾರಿಕೆಯಲ್ಲಿ ಆಟ ಆಡಿದರು. ಇದರ ನಂತರ ಬೆಂಗಳೂರು ತಂಡ ಮುಂದಿನ 23 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. 31 ಎಸೆತಗಳಲ್ಲಿ 180 ಸ್ಟ್ರೈಕ್ ರೇಟ್ನಲ್ಲಿ 56 ರನ್ ಗಳಿಸಿದ ನಂತರ ಸಾಲ್ಟ್ ಔಟ್ ಆದರು.
ಸಾಲ್ಟ್ ನಂತರ ಬಂದ ದೇವದತ್ ಪಡಿಕಲ್ ಕೂಡ 10 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ನಂತರ ನಾಯಕ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ಜೊತೆಯಾಟ ಆಡಿದರು. ಕೊಹ್ಲಿ ಕೇವಲ 36 ಎಸೆತಗಳಲ್ಲಿ 163 ಸ್ಟ್ರೈಕ್ ರೇಟ್ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಾಯದಿಂದ 59 ರನ್ ಗಳಿಸಿದರೆ, ರಜತ್ ಪಾಟಿದಾರ್ ಕೇವಲ 16 ಎಸೆತಗಳಲ್ಲಿ 212 ಸ್ಟ್ರೈಕ್ ರೇಟ್ನಲ್ಲಿ 34 ರನ್ ಗಳಿಸಿದರು.
ಈ ಮೂಲಕ ಆರ್ಸಿಬಿ 175 ರನ್ಗಳ ಗುರಿಯನ್ನು ಕೇವಲ 22 ಎಸೆತಗಳು ಬಾಕಿ ಇರುವಾಗಲೇ ತಲುಪಿ ಭರ್ಜರಿ ಜಯ ಸಾಧಿಸಿತು. ಇದು ಆರ್ಸಿಬಿಯ ಮೊದಲ ಗೆಲುವಾಗಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.