ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜಣ್ಣ ದೂರು ಕೊಟ್ಟರೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಕುರಿತು ಚರ್ಚಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದ್ದಾರೆ.
ರಾಜಣ್ಣ ದೂರು ಕೊಡೋದಾಗಿ ಹೇಳಿದ್ದಾರೆ, ಇನ್ನೂ ಕೊಟ್ಟಿಲ್ಲ. ಅವರು ದೂರು ಕೊಟ್ಟರೆ ತನಿಖೆಗೆ ಆದೇಶಿಸುತ್ತೇವೆ. ನಾನು ಸಿಎಂ ಜೊತೆ ಉನ್ನತ ಮಟ್ಟದ ತನಿಖೆ ಬಗ್ಗೆ ಚರ್ಚೆ ಮಾಡ್ತೇನೆ. ಸಿಎಂ ಜೊತೆಗೆ ಚರ್ಚೆ ಮಾಡಿದ ಬಳಿಕ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.