ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ್ಯಾಪ್ ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಬಿರುಗಾಳಿಯಾಗಿದೆ. ವಿಧಾನಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಅವರು ಸ್ಫೋಟಕ ಹೇಳಿಕೆ ನೀಡಿದ ಮೇಲೆ ಅದು ಸುಂಟರಗಾಳಿಯ ಸ್ವರೂಪ ಪಡೆದಿದೆ.
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಭೇಟಿ ಮಾಡಿ ಸಿದ್ದರಾಮಯ್ಯ ಅವರ ಬಳಿ ಹನಿಟ್ರ್ಯಾಪ್ ಬಗ್ಗೆಯೇ ಮಹತ್ವದ ಚರ್ಚೆ ನಡೆಸಿದ್ದಾರೆ.
ಸಿದ್ಧರಾಮಯ್ಯ ಅವರನ್ನು ಭೇಟಿಯಾದ ಖರ್ಗೆ ಅವರು, ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ರಾಜಕೀಯ, ರಾಜ್ಯದ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಬಗ್ಗೆ ನಾನು ಹೇಳಲು ಆಗುತ್ತಾ? ಇಲ್ಲಿಯವರನ್ನೇ ಕೇಳಿ ಎಂಬುದಾಗಿ ತಿಳಿಸಿದರು.
ಸಿಎಂ ಸಿದ್ಧರಾಮಯ್ಯ ಅವರನ್ನು ಸೌಹಾರ್ಧಯುತವಾಗಿ ಭೇಟಿಯಾಗಿದ್ದೇನೆ. ಯೋಗಕ್ಷೇಮ ಕೇಳೋದು ನಮ್ಮ ಕರ್ತವ್ಯವಾಗಿದೆ. ಆ ಕಾರಣದಿಂದಲೇ ಇಂದು ಸಿದ್ಧರಾಮಯ್ಯ ಭೇಟಿಯಾಗಿರೋದಾಗಿ ತಿಳಿಸಿದರು.