ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಹೈಕೋರ್ಟ್ನ ಜಸ್ಟಿಸ್ ವರ್ಮಾ ಅವರ ಮನೆಯಲ್ಲಿ ಸಿಕ್ಕಿದ್ದ ಕಂತೆ ಕಂತೆ ನೋಟುಗಳ ವಿಚಾರಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಯಶವಂತ್ ವರ್ಮಾ ಅಲ್ಲಗಳೆದಿದ್ದಾರೆ.
ಕರೆನ್ಸಿ ನೋಟು ಪತ್ತೆಯಾಗಿದ್ದು ಔಟ್ಹೌಸ್ನಲ್ಲಿ ನಾನಾಗಲಿ, ನನ್ನ ಕುಟುಂಬದವರಗಾಲೀ ಔಟ್ಹೌಸ್ನಲ್ಲಿ ಹಣ ಇಟ್ಟಿರಲಿಲ್ಲ. ನಾವು ವಾಸ ಇರುವ ಮನೆಯಲ್ಲಿ ಹಣ ಪತ್ತೆಯಾಗಿಲ್ಲ. ಔಟ್ಹೌಸ್ ಮತ್ತು ನಮ್ಮ ಮನೆಯ ನಡುವೆ ಕಂಪೌಂಡ್ ಇದೆ.ಹೀಗಾಗಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ನಾನು ಅಥವಾ ನನ್ನ ಕುಟುಂಬ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇರಿಸಿಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಆಪಾದಿತ ನಗದು ನಮಗೆ ಸೇರಿದೆ ಎಂಬ ಸಲಹೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ನಗದನ್ನು ನಾವು ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಹೇಳಿದರು.
ಪತ್ರಿಕೆಗಳಲ್ಲಿ ನನ್ನ ಮೇಲೆ ಆರೋಪ ಹೊರಿಸಿ ಮಾನಹಾನಿಯಾಗುವ ಮೊದಲು ಮಾಧ್ಯಮವು ಸ್ವಲ್ಪ ವಿಚಾರಣೆ ನಡೆಸಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದು ನ್ಯಾ. ವರ್ಮಾ ಹೇಳಿದರು.
ಹೈಕೋರ್ಟ್ನ ಜಸ್ಟಿಸ್ ಯಶವಂತ್ ವರ್ಮಾ ಅವರ ಮನೆಗೆ ಬಿದ್ದಾಗ, ಅದನ್ನು ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕಂತೆ ಕಂತೆ ನೋಟುಗಳು ಇರುವ ದೃಶ್ಯ ಕಂಡು ಬಂದಿತ್ತು. ಹಣ ಇಟ್ಟಿದ್ದ ಕೊಠಡಿಗೆ ಬೆಂಕಿ ಬಿದ್ದು ಕೋಟಿಗಟ್ಟಲೇ ಕರೆನ್ಸಿ ನೋಟು ಸುಟ್ಟು ಭಸ್ಮವಾಗಿದ್ದವು.
ಈಗ ಮನೆಯೊಳಗೆ ಪತ್ತೆಯಾದ ಕರೆನ್ಸಿ ನೋಟುಗಳನ್ನು ಕ್ಲೀನ್ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ. ಹೈಕೋರ್ಟ್ನಲ್ಲಿ ಹಾಲಿ ನ್ಯಾಯಮೂರ್ತಿಗಳ ಮನೆಯಲ್ಲಿ ಇಷ್ಟೊಂದು ನೋಟುಗಳ ರಾಶಿ ಹೇಗೆ ಬಂತು ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಹೀಗಾಗಿ ದೆಹಲಿ ಪೊಲೀಸ್ ಕಮೀಷನರ್ ಮೂಲಕ ಕೇಂದ್ರ ಗೃಹ ಇಲಾಖೆಗೆ ವರದಿ ರವಾನೆಯಾಗಿದೆ. ಗೃಹ ಇಲಾಖೆಗೆ ಸುಪ್ರೀಂಕೋರ್ಟ್ ಸಿಜೆಐ ವರದಿ ರವಾನೆ ಮಾಡಿದ್ದಾರೆ. ಸಿಜೆಐಯಿಂದ ಮೂವರು ಜಡ್ಜ್ಗಳಿಂದ ತನಿಖೆ ಮಾಡುವಂತೆ ಆದೇಶ ಬಂದಿದೆ.