FOOD | ಜಟ್ ಪಟ್ ಅಂತಾ ತಯಾರಾಗುತ್ತೆ ಆವಕಾಡೋ ಟೋಸ್ಟ್! ಬ್ರೇಕ್ ಫಾಸ್ಟ್ ಗೆ ನೀವೂ ಟ್ರೈ ಮಾಡಬಹುದು!

ಆವಕಾಡೋ ಟೋಸ್ಟ್ ಇದು ತಕ್ಷಣ ತಯಾರಿಸೋ ಅಡುಗೆಯಾಗಿ ಆರೋಗ್ಯಕರ, ತೃಪ್ತಿದಾಯಕ ಉಪಹಾರ ಅಥವಾ ಲಘು ಆಹಾರವಾಗಿ ಸೇವಿಸಬಹುದು. ಉತ್ತಮ ಕೊಬ್ಬುಗಳು, ಫೈಬರ್ ಮತ್ತು ಸಾಕಷ್ಟು ಪೋಷಕಾಂಶಗಳಿರುವುದರಿಂದ ಇದು ಪೌಷ್ಟಿಕ ಆಹಾರವಾಗಿದೆ. ಕೇವಲ 15 ನಿಮಿಷಗಳಲ್ಲಿ ಇದನ್ನು ಸಿಂಪಲ್ ಆಗಿ ಮಾಡಬಹುದು.

ಬೇಕಾಗುವ ಪದಾರ್ಥಗಳು:
ಗಾರ್ಲಿಕ್ ಬ್ರೆಡ್ – 8-10 ಸ್ಲೈಸ್
ಆಲಿವ್ ಎಣ್ಣೆ – 1 ಟೀಸ್ಪೂನ್
ಆವಕಾಡೋ – 1
ಹೆಚ್ಚಿದ ಬೆಳ್ಳುಳ್ಳಿ – 1
ಓರಿಗಾನೋ – ಅರ್ಧ ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ನಿಂಬೆ ರಸ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಸ್ಪೂನ್ ಸಹಾಯದಿಂದ ಆವಕಾಡೋ ಒಳಭಾಗವನ್ನು ಸ್ಕೂಪ್ ಮಾಡುವ ಮೂಲಕ ಸಿಪ್ಪೆಯಿಂದ ಬೇರ್ಪಡಿಸಿಕೊಳ್ಳಿ. ಈಗ ಮಿಕ್ಸರ್ ಜಾರ್‌ನಲ್ಲಿ ಆವಕಾಡೋ ತಿರುಳು, ಬೆಳ್ಳುಳ್ಳಿ ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಆವಕಾಡೋ ಮಿಶ್ರಣಕ್ಕೆ ಓರಿಗಾನೋ, ಕರಿಮೆಣಸಿನ ಪುಡಿ, ಉಪ್ಪು ಹಾಗೂ ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ.

ಈಗ ತವಾವನ್ನು ಬಿಸಿ ಮಾಡಿ, ಆಲಿವ್ ಎಣ್ಣೆ ಹಾಕಿ, ಬ್ರೆಡ್ ಸ್ಲೈಸ್‌ಗಳನ್ನು ಮಧ್ಯಮ ಉರಿಯಲ್ಲಿ ಎರಡೂ ಕಡೆ ಟೋಸ್ಟ್ ಮಾಡಿಕೊಳ್ಳಿ. ಈಗ ಆವಕಾಡೋ ಮಿಶ್ರಣವನ್ನು ಬ್ರೆಡ್ ಸ್ಲೈಸ್‌ಗಳ ಮೇಲೆ ಹರಡಿಕೊಂಡರೆ ಸಿಂಪಲ್ ಹಾಗೂ ಆರೋಗ್ಯಕರ ಆವಕಾಡೋ ಟೋಸ್ಟ್ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!