ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸದ್ಯ ಐಪಿಎಲ್ ಜ್ವರ ಜೋರಾಗಿದೆ. ಹೀಗಾಗಿ, ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಈ ಕಾರಣಕ್ಕೆ IPLನೇ ದೊಡ್ಡ ಪರದೆಮೇಲೆ ಪ್ರದರ್ಶನ ಮಾಡುವ ನಿರ್ಧಾರಕ್ಕೆ PVR INOX ಮುಂದಾಗಿದೆ.
ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ 30ಕ್ಕೂ ಹೆಚ್ಚು ನಗರಗಳಲ್ಲಿ ಮ್ಯಾಚ್ ವೀಕ್ಷಣೆಗೆ ಅವಕಾಶ ಇದೆ. ದೊಡ್ಡ ಪರದೆಮೇಲೆ ಕ್ರಿಕೆಟ್ ವೀಕ್ಷಣೆ ಮಾಡಿ ಹೊಸ ಅನುಭವ ಪಡೆಯುವ ಅವಕಾಶವನ್ನು ಕ್ರಿಕೆಟ್ ಪ್ರೇಮಿಗಳಿಗೆ ಪಿವಿಆರ್ ನೀಡಿದೆ.
ಈಗಾಗಲೇ ಓಪನಿಂಗ್ ಸೆರೆಮನಿಯ ಮ್ಯಾಚ್ನ ಲೈವ್ ಸ್ಟ್ರೀಮ್ ಮಾಡಿಯಾಗಿದೆ. ಅದೇ ರೀತಿ ವೀಕೆಂಡ್ ಮ್ಯಾಚ್ ಹಾಗೂ ಪ್ಲೇಯ್ ಆಫ್, ಫೈನಲ್ನ ಪ್ರದರ್ಶನ ಮಾಡಲು ಪಿವಿಆರ್ ನಿರ್ಧರಿಸಿದೆ. ದೊಡ್ಡ ಪರದೆ ಮೇಲೆ ಕ್ರಿಕೆಟ್ನ ನೀವು ಅನುಭವಿಸುವ ಅವಕಾಶವನ್ನು ಪಿವಿಆರ್ ನೀಡಿದೆ. ಇದಕ್ಕಾಗಿ ಬಿಸಿಸಿಐ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ.
ಈ ಮೊದಲು ಕೆಲವು ಪಂದ್ಯಗಳನ್ನು ಪಿವಿಆರ್ ದೊಡ್ಡ ಪರದೆಮೇಲೆ ಪ್ರದರ್ಶನ ಮಾಡಿತ್ತು. ಆ ಸಂದರ್ಭದಲ್ಲಿ ಸಿನಿಮಾ ಮಂದಿ ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ‘ಪಿವಿಆರ್ ರೀತಿಯ ಪರದೆಗಳು ಇರೋದು ಸಿನಿಮಾ ಪ್ರದರ್ಶನಕ್ಕಾಗಿ. ಅಲ್ಲಿ ಕ್ರಿಕೆಟ್ ಸ್ಟ್ರೀಮ್ ಮಾಡೋದು ಎಷ್ಟು ಸರಿ’ ಎಂಬ ಪ್ರಶ್ನೆಯನ್ನು ವ್ಯಕ್ತಪಡಿಸಲಾಗಿತ್ತು. ಆದರೆ, ಇದಕ್ಕೆ ಪಿವಿಆರ್ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಏಕೆಂದರೆ ಕ್ರಿಕೆಟ್ ಪ್ರದರ್ಶನ ಮಾಡಿದಾಗ ಜನರು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.