ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ ಸೊನಾಲಿ ಸೂದ್ ಚಲಿಸುತ್ತಿದ್ದ ಕಾರು ಅಪಘಾತಕ್ಕೆಒಳಗಾಗಿದೆ.
ಮುಂಬೈ-ನಾಗಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ನಜ್ಜುಗುಜ್ಜಾದ ಕಾರಿನ ಫೋಟೋ ವೈರಲ್ ಆಗಿದೆ. ಕಾರಿನಲ್ಲಿ ಪ್ರಯಾಣ ಮಾಡುವಾಗ ಸೊನಾಲಿ ಸೂದ್ ಜೊತೆ ಅವರ ಸಹೋದರಿ ಹಾಗೂ ಸಹೋದರಿಯ ಮಗ ಕೂಡ ಇದ್ದರು.
ಅಪಘಾತದ ಬಳಿಕ ಸೋನಾಲಿ ಸೂದ್ ಹಾಗೂ ಅವರ ಸಹೋದರಿಯ ಮಗನನ್ನು ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರಿಗೂ ತೀವ್ರ ಗಾಯಗಳು ಆಗಿವೆ ಎನ್ನಲಾಗಿದೆ. ಕೂಡಲೇ ಸೋನು ಸೂದ್ ಕೂಡ ಆಸ್ಪತ್ರಗೆ ತೆರಳಿದ್ದಾರೆ. ಮುಂದಿನ 48ರಿಂದ 72 ಗಂಟೆಗಳ ಕಾಲ ಇಬ್ಬರನ್ನೂ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ನಾಗಪುರ-ಮುಂಬೈ ಹೈವೇಯಲ್ಲಿ ಸೊನಾಲಿ ಸೂದ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ. ಈ ಅಪಘಾತದಲ್ಲಿ ಸೊನಾಲಿ ಸೂದ್ ಅವರ ಸಹೋದರಿಗೆ ಹೆಚ್ಚಿನ ಗಾಯಗಳು ಆಗಿಲ್ಲ. ಕೇವಲ ಸಣ್ಣ ಪುಟ್ಟ ಗಾಯಗಳು ಆಗಿವೆ. ಆದರೆ ಸೊನಾಲಿ ಮತ್ತು ಸಹೋದರಿಯ ಪುತ್ರನಿಗೆ ಗಂಭೀರವಾಗಿ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.