ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿದ್ದು, ಸಚಿವ ಕೆಎನ್ ರಾಜಣ್ಣ ಮಾಡಿದ ಹನಿಟ್ರ್ಯಾಪ್ ಆರೋಪ ಕಾಂಗ್ರೆಸ್ನಲ್ಲಿ ತಲ್ಲಣ ಮೂಡಿಸಿದೆ.
ಇದೀಗ ಗೃಹಸಚಿವ ಪರಮೇಶ್ವರ್‌ಗೆ ಕೆಎನ್ ರಾಜಣ್ಣ ಹನಿಟ್ರ್ಯಾಪ್ ಯತ್ನದ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಈಗಾಗಲೇ ಕೆಎನ್ ರಾಜಣ್ಣ ಗೃಹಸಚಿವರನ್ನು ಭೇಟಿಯಾಗಿದ್ದು ಈ ವೇಳೆ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಗೃಹಸಚಿವರ ಭೇಟಿ ಬಳಿಕ ಮಾತನಾಡಿದ ರಾಜಣ್ಣ, ನಾನು ಪರಮೇಶ್ವರ್‌ಗೆ ದೂರು ನೀಡಿಲ್ಲ, ಇಂದು ಸಂಜೆ ಭೇಟಿಯಾಗುವಂತೆ ಹೇಳಿದ್ದಾರೆ. ದೂರು ನೀಡಿದ ಬಳಿಕ ಪ್ರತಿಯನ್ನು ನೀಡುತ್ತೇನೆ. ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಆದರೆ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿ ಅಳವಡಿಸಿಲ್ಲ, ಸಾಕ್ಷಿ ಎಲ್ಲಿಂದ ಕೊಡಲಿ ಎಂದು ಹೇಳಿದ್ದಾರೆ.