ಲೋಕಸಭೆಯಲ್ಲಿ ಹಣಕಾಸು ಮಸೂದೆ-2025 ಅಂಗೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

35 ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ 2025ಕ್ಕೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆಯಿತು.

ಈ ಮೂಲಕ ಬಜೆಟ್ ಅನುಮೋದನೆ ಪ್ರಕ್ರಿಯೆಯು ಲೋಕಸಭೆಯಲ್ಲಿ ಪೂರ್ಣಗೊಂಡಂತಾಯಿತು. ಇನ್ನು ಮಸೂದೆಯನ್ನು ರಾಜ್ಯಸಭೆಯು ಪರಿಗಣಿಸಬೇಕಾಗಿದೆ. ಅಲ್ಲಿಯೂ ಅನುಮೋದನೆ ದೊರೆತಲ್ಲಿ 2025-26ನೇ ಸಾಲಿನ ಬಜೆಟ್ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ.

2025-26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ವೆಚ್ಚದ ಗಾತ್ರ ಒಟ್ಟು ರೂ. 50.65 ಲಕ್ಷ ಕೋಟಿಯಾಗಿದೆ. ಇದು ಪ್ರಸಕ್ತ ಸಾಲಿಗೆ ಹೋಲಿಸಿದಲ್ಲಿ ಶೇ. 7.4 ರಷ್ಟು ಅಧಿಕವಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವು ರೂ.11. 22 ಲಕ್ಷ ಕೋಟಿ ಹಾಗೂ ಪರಿಣಾಮಕಾರಿ ಬಂಡವಾಳ ವೆಚ್ಚ ರೂ. 15. 48 ಲಕ್ಷ ಕೋಟಿಯಾಗಿದೆ. ತೆರಿಗೆ ಮೂಲಕ ಹರಿದು ಬರುವ ಆದಾಯ ಸಂಗ್ರಹವು ರೂ. 42. 70 ಲಕ್ಷ ಕೋಟಿಯಾಗಿದ್ದು, ಸಾಲದ ಮೊತ್ತ ರೂ. 14. 01 ಲಕ್ಷ ಕೋಟಿಯಾಗಿದೆ ಎಂದು ಪ್ರಸ್ತಾಪಿಸಿದೆ.

ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ರೂ. 5,41,850.21 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಇದು ರೂ. 4,15,356.25 ಕೋಟಿಯಾಗಿತ್ತು. ಮುಂದಿನ ವರ್ಷಕ್ಕೆ ಕೇಂದ್ರ ಯೋಜನೆಗಳಿಗೆ ರೂ. 16.29 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ರೂ. 15.13 ಲಕ್ಷ ಕೋಟಿಯಷ್ಟಿತ್ತು.

ಬಜೆಟ್ ನಲ್ಲಿ ರಾಜ್ಯಗಳ ಪಾಲು, ಸಾಲ, ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿದಂತೆ 2025-26ನೇ ಸಾಲಿನಲ್ಲಿ ರೂ. 25, 01, 284 ಕೋಟಿ ಮೀಸಲಿಡಲಾಗಿದೆ. 2025-26ನೇ ಸಾಲಿನಲ್ಲಿ ಜೆಡಿಪಿಯು ರೂ. 3,56,97,923 ಕೋಟಿಯಾಗಲಿದೆ. ಇದು 2024-25ರಲ್ಲಿ ರೂ.3. 24 ಲಕ್ಷ ಕೋಟಿ ಇತ್ತು ಎಂದು ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (NSO)ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!