ಹೊಸದಿಗಂತ ರಾಮನಗರ :
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ರಾಜ್ಯದ ಚುಕ್ಕಾಣಿ ವಹಿಸಿಕೊಂಡಗ ಜನರು ಮಾತ್ರ ಅಲ್ಲ ನಮಗೂ ಕೂಡ ಆಶಾ ಭಾವನೆ ಮೂಡಿತು ಆದರೇ ಎಲ್ಲ ಭಾವನೆಗಳು ನಿರಾಸೆ ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಜಾತಿಯ ಜನರೂ ಸಹ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಅಚ್ಚುಕಟ್ಟಾದ ರೀತಿಯಲ್ಲಿ ಕಾಪಾಡುತ್ತಾರೆ ಎಂದು ಎಲ್ಲ ವರ್ಗದ ಜನರು ತುಂಬಾ ಆಶಾ ಭಾವನೆ ಹೊಂದಿದ್ದರು ಆದರೆ ಜನರ ಆಶೆಗಳಿಗೆ ತಣ್ಣಿರು ಎರಚಿದೆ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸಕಾ೯ರ ಹನಿಟ್ರ್ಯಾಪ್ ನಲ್ಲಿ ಮುಳುಗಿದೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ರಾಜ್ಯದ ವಿಧಾನಸಭೆಯಲ್ಲಿ ರಾಜ್ಯ ಆಳುತ್ತಿರುವ ಕಾಂಗ್ರೆಸ್ ಸಕಾ೯ರದ ಪ್ರಭಾವಿ ಮಂತ್ರಿ ರಾಜಣ್ಣ ನನಗೆ ಹನಿಟ್ರ್ಯಾಪ್ ನಡೆದಿದೆ ಎಂದು ಘಂಟಘೋಷವಾಗಿ ಹೇಳಿದರು ವಿರೋಧ ಪಕ್ಷದ ನಮ್ಮಗೆ ಅಚ್ಚರಿ ಮೂಡಿಸಿತು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹನಿಟ್ರ್ಯಾಪ್ ಬಗ್ಗೆ ಒಂದೇ ಒಂದು ಮಾತು ಕೂಡ ಹೇಳಿಕೆ ನೀಡಿಲ್ಲ ಏಕೆ ಎಂದರೆ ಸಿದ್ದರಾಮಯ್ಯ ಕೂಡ ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ಮುಸ್ಲಿಂ ಜನಾಂಗದವರಿಗೆ ಮೀಸಲಾತಿ ನೀಡಿರುವುದು ಸರಿಯಲ್ಲ ರಾಜ್ಯ ಸರ್ಕಾರ ಜನರಿಗೆ ಮಂಕುಬೂದಿ ಎರಚಿ ಅಧಿಕಾರಕೆ ಬಂದ ಕಾಂಗ್ರೆಸ್ ಸಕಾ೯ರ ಒಂದು ಜನಾಂಗಕ್ಕೆ ಸೇರಿದವರನ್ನು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಇದು ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ. ಪ್ರಸಾದ್ಗೌಡ. ಗೌತಮ್ ಗೌಡ. ಶಿವಾನಂದ. ಮುಂತಾದವರು ಉಪಸ್ಥಿತರಿದ್ದರು