IPL-2025 | ಹೈದರಾಬಾದ್ ಬ್ಯಾಟಿಂಗ್ ಅಬ್ಬರಕ್ಕೆ ಲಕ್ನೋ ಬ್ರೇಕ್: ಗೆಲುವಿಗೆ 191 ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್ ಬ್ಯಾಟಿಂಗ್ ಅಬ್ಬರಕ್ಕೆ ಇಂದು ಲಕ್ನೋ ಸೂಪರ್ ಜೈಂಟ್ಸ್ ಕಡಿವಾಣ ಹಾಕಿದ್ದು, 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್​​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಇಳಿದ ಹೈದರಾಬಾದ್ ಗೆ ಆರಂಭದಲ್ಲೇ ಆಘಾತ ಎದುರಾಗಿದ್ದು, ಶಾರ್ದೂಲ್ ಠಾಕೂರ್ 3ನೇ ಓವರ್​​ನಲ್ಲಿ ಅಭಿಷೇಕ್ ವರ್ಮಾ (6) ಹಾಗೂ ಇಶಾನ್ ಕಿಶನ್(0) ವಿಕೆಟ್ ಪಡೆದು ಶಾಕ್ ನೀಡಿದರು.

ಬಳಿಕ3ನೇ ವಿಕೆಟ್​ಗೆ ಒಂದಾದ ಟ್ರಾವಿಸ್ ಹೆಡ್​ ಹಾಗೂ ನಿತೀಶ್​ ರೆಡ್ಡಿ ಅರ್ಧಶತಕದ ಜೊತೆಯಾಟ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 47 ರನ್​ಗಳಿಸಿದ್ದ ಹೆಡ್​ ರನ್ನ ಕ್ಲೀನ್ ಬೌಲ್ಡ್ ಆದರು.

ಬಳಿಕ ನಿತೀಶ್ ಜೊತೆ ಸೇರಿ 4ನೇ ವಿಕೆಟ್​ಗೆ 34 ರನ್​ಗಳ ಜೊತೆಯಾಟ ನೀಡಿದ್ದ ಕ್ಲಾಸೆನ್​(24) ರನ್ ಔಟ್ ಗೆ ಬಲಿಯಾದರು. ಇದರ ಬೆನ್ನಲ್ಲೇ 28 ಎಸೆತಗಳಲ್ಲಿ 32 ರನ್​ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ ರವಿ ಬಿಷ್ಣೋಯ್ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು.

ಅನಿಕೇತ್ ವರ್ಮಾ 15 ಎಸೆತಗಳಲ್ಲಿ 5 ಸಿಕ್ಸರ್​​ಗಳ ಸಹಿತ 36 ರನ್​ಗಳಿಸಿ ಔಟ್ ಆದರು. ಕನ್ನಡಿಗ ಅಭಿನವ್ ಮನೋಹರ್ 6 ಎಸೆತಗಳಲ್ಲಿ ಕೇವಲ 2ರನ್​ಗಳಿಸಿ ಔಟ್ ಆದರು. ನಾಯಕ ಪ್ಯಾಟ್ ಕಮಿನ್ಸ್ ಕೇವಲ 4 ಎಸೆತಗಳಲ್ಲಿ 3 ಸಿಕ್ಸರ್​ಗಳ ನೆರವಿನಿಂದ 18 ರನ್​ಗಳಿಸಿ ಔಟ್ ಆದರು. ಶಮಿ 1, ಹರ್ಷಲ್ ಪಟೇಲ್ ಅಜೆಯ 12 ರನ್​​ಗಳಿಸಿದರು.

ಲಕ್ನೋ ಪರ ಶಾರ್ದೂಲ್ ಠಾಕೂರ್ 24ಕ್ಕೆ 4 ವಿಕೆಟ್ ಪಡೆದು ಮಿಂಚಿದರೆ, ಆವೇಶ್ ಖಾನ್, ದಿಗ್ವೇಶ್ ರಥಿ, ಪ್ರಿನ್ಸ್ ಯಾದವ್ ಹಾಘೂ ರವಿ ಬಿಷ್ಭೋಯ್ ತಲಾ 1 ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!