ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದಲ್ಲಿ ಅಧಿಕಾರದಲ್ಲಿರುವ ಲಿಬರಲ್ ಪಾರ್ಟಿ ಭಾರತದ ಮೇಲಿರುವ ತನ್ನ ದ್ವೇಷವನ್ನು ಮುಂದುವರಿಸಿದೆ. ಖಲಿಸ್ತಾನಿಗಳ ವಿರುದ್ಧ ಕಠಿಣ ನಿಲುವು ತಾಳಿದ್ದ ಸಂಸದ ಚಂದ್ರ ಆರ್ಯಗೆ ಚುನಾವಣೆಯಲ್ಲಿ ಟಿಕೆಟ್ ಕೊಡಲು ನಿರಾಕರಿಸಿದೆ.
ಕಳೆದ ವರ್ಷ ಭಾರತ ಪ್ರವಾಸದ ವೇಳೆ ಪ್ರಧಾನಿ ಮೋದಿ ಭೇಟಿ ಮಾಡಿದ್ದ ಬಗ್ಗೆ ಸರ್ಕಾರಕ್ಕೆ ಚಂದ್ರ ಆರ್ಯ ಮಾಹಿತಿ ನೀಡಿಲ್ಲ ಎಂಬ ನೆಪ ಹೇಳಿ ಟಿಕೆಟ್ ಕೊಡಲು ನಿರಾಕರಿಸಿದೆ ಎನ್ನಲಾಗಿದೆ.
ತಮ್ಮ ಮೇಲೆ ಭಾರತ ಸರ್ಕಾರದ ಪ್ರಭಾವವಿದೆ ಎಂಬ ಆರೋಪಗಳನ್ನು ಚಂದ್ರ ಆರ್ಯ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಏಪ್ರಿಲ್ 28ಕ್ಕೆ ಕೆನಡಾ ಸಂಸತ್ ಚುನಾವಣೆ ನಡೆಯಲಿದೆ.