ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ನಟನೆಯ ಸಿಖಂದರ್ ಇನ್ನೇನು ಎರಡು ದಿನದಲ್ಲಿ ರಿಲೀಸ್ ಆಗಲಿದೆ. ಸಿನಿಮಾ ಪ್ರಮೋಷನ್ಸ್ ಮುಗಿಸಿದ ನಟಿ ಸಧ್ಯಕ್ಕೆ ರಿಲ್ಯಾಕ್ಸ್ ಆಗಿದ್ದಾರೆ.
ಇದೇ ವೇಳೆ ಇನ್ಸ್ಟಾಗ್ರಾಮ್ ಫ್ಯಾಮಿಲಿಗಾಗಿ ಕ್ವೆಸ್ಶನ್ ಹಾಗೂ ಆನ್ಸರ್ ಸೀರೀಸ್ ಮಾಡಿದ್ದಾರೆ. ಇದರಲ್ಲಿ ನಿಮ್ಮ ಫೇವರೆಟ್ ಕೊರಿಯನ್ ಡ್ರಾಮಾ ಯಾವುದು ಎಂದು ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ರಶ್ಮಿಕಾ ʼIts okay to not be okayʼ ಆಲ್ ಟೈಮ್ ಫೇವರೆಟ್ ಎಂದಿದ್ದಾರೆ.
ಇನ್ನೂ ತಮ್ಮಿಷ್ಟದ ಸಿನಿಮಾ ಬಗ್ಗೆ ಮಾತನಾಡುತ್ತಾ, ನಾನು ‘ಲವ್ ಸ್ಕಾಟ್’ ಡ್ರಾಮಾವನ್ನು ಈಗಷ್ಟೇ ಮುಗಿಸಿದ್ದೇನೆ. ‘ಫಸ್ಟ್ ಫ್ರಾಸ್ಟ್’ ಎಂಬ ಚೀನೀ ಡ್ರಾಮಾ ಕೂಡಾ ಚೆನ್ನಾಗಿದೆ. ಪ್ರಸ್ತುತ ‘ಅಂಡರ್‌ಕವರ್ ಹೈಸ್ಕೂಲ್’ ವೀಕ್ಷಿಸುತ್ತಿದ್ದೇನೆ. ನಾನು ಈವರೆಗೆ ಅನೇಕ ಕೊರಿಯನ್ ಡ್ರಾಮಾಗಳನ್ನು ನೋಡಿದ್ದೇನೆ. ನನಗೆಲ್ಲವೂ ಹಿಡಿಸಿದೆ ಎಂದು ತಿಳಿಸಿದರು.