ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿವರ್ತನೆಗೆ ಸಂಕೇತವಾಗುವ ಯುಗಾದಿ ಮತ್ತೆ ಬಂದಿದ್ದು ಆಚರಣೆಗೆ ಇಡೀ ಕರುನಾಡು ತಯಾರಿ ನಡೆಸುತ್ತಿದೆ.
ಈ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಪೂಜೆಗೆ ಬೇಕಾದ ವಸ್ತು ಖರೀದಿಗೆ ಬಂದವರಿಗೆ ಶಾಕ್ ಆಗಿದೆ. ಹೂ ಹಣ್ಣು ಬೆಲೆ ಗಗನಕ್ಕೇರಿದೆ. ಹೂವಿನ ರೇಟ್ ಕೇಳಿ ಸಾರ್ವಜನಿಕರು ದಂಗಾಗಿದ್ದಾರೆ.
ಬೆಂಗಳೂರು ಮಾರ್ಕೆಟ್ ನಲ್ಲಿ ಮಲ್ಲಿಗೆಗೆ 1800-2000 ರೂ, ಸೇವಂತಿಗೆ- 350 ರೂ, ಗುಲಾಬಿ- 250 ರೂ ಸೇರಿದಂತೆ ಪ್ರತಿ ಹೂವಿನ ಬೆಲೆ ಗಗನಕ್ಕೇರಿದೆ. ಇನ್ನು ಹಣ್ಣುಗಳ ಬೆಲೆ ಕೇಳಿ ಜನ ಖರೀದಿಸಲು ಹಿಂದುಮುಂದು ನೋಡುತ್ತಿದ್ದಾರೆ. ದಾಳಿಂಬೆ- 150- 200 ರೂ,ಎಲಕ್ಕಿ ಬಾಳೆಹಣ್ಣು- 100 ರೂ,ಸೇಬು- 120-160 ರೂ, ದ್ರಾಕ್ಷಿ- 80-100 ರೂ ಆಗಿದೆ.
ಬೆಲೆ ಗಗನಕ್ಕೇರಿದ್ದರೂ ಹೂವು, ಹಣ್ಣು, ಮಾವು-ಬೇವು, ಹೊಸಬಟ್ಟೆಖರೀದಿ ಜೋರಾಗಿಯೇ ಇದೆ.