ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 2 ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 7 ಡಿಗ್ರಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.
ಎರಡು ದಿನಗಳ ಹಿಂದೆ ದೆಹಲಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇತ್ತು. ಶುಕ್ರವಾರದ ವೇಳೆಗೆ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಕಳೆದ ಎರಡೂ ದಿನದಲ್ಲಿ ಈ ತಾಪಮಾನವನ್ನು ಮೀರಿಲ್ಲ ಎಂದು ವರದಿ ಮಾಡಿದೆ.
ದೆಹಲಿಯ ಪೂರ್ವದಲ್ಲಿರುವ ಗೋರಖ್‌ಪುರ ಹಾಗೂ ಪಶ್ಚಿಮದಲ್ಲಿರುವ ಅಮೃತಸರದಲ್ಲಿ 10 ಗ್ರೇಡಿಯಂಟ್ ಪಾಯಿಂಟ್ ಗಾಳಿಯ ಒತ್ತಡವಿರುವುದರಿಂದ ದೆಹಲಿಯಲ್ಲಿ ತಾಪಮಾನ ಇಳಿಕೆಗೆ ಕಾರಣವಾಗಿದೆ.
ಈ ಗಾಳಿಯ ಒತ್ತಡ ಹಗಲಿನಲ್ಲಿ ಗರಿಷ್ಠ ತಾಪಮಾನದ ಮೇಲೆ ಪರಿಣಾಮ ಬೀರುವುದಲ್ಲದೆ, ರಾತ್ರಿಯ ವೇಳೆಯಲ್ಲಿಯೂ ತಾಪಮಾನದ ಇಳಿಕೆಗೆ ಕಾರಣವಾಗುತ್ತದೆ. ಶನಿವಾರ ನಸುಕಿನ ಜಾವ ದಾಖಲಾದ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಕೆಲವು ಪ್ರದೇಶಗಳಲ್ಲಿ, ಗಾಳಿಯ ವೇಗ ಗಂಟೆಗೆ 45 ಕಿ.ಮೀಗೆ ತಲುಪಿದೆ.
ಆದ್ರೆ ಗಾಳಿಯ ಒತ್ತಡ ಕ್ರಮೇಣ ಕಡಿಮೆಯಾದಂತೆ ಏಪ್ರಿಲ್ ಆರಂಭದಿಂದ ದೆಹಲಿಯಲ್ಲಿ ಬಿಸಿಲು ಅಬ್ಬರಿಸುವ ನಿರೀಕ್ಷೆಯಿದೆ.