ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಎಲ್ 2: ಎಂಪುರಾನ್’ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಈ ಚಿತ್ರ 48 ಗಂಟೆಗಳಲ್ಲಿ 100 ಕೋಟಿ ಕ್ಲಬ್ ತಲುಪಿದೆ ಎಂದು ನಟ ಮೋಹನ್‌ಲಾಲ್ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದಾರೆ.
ಮೊದಲ ದಿನವೇ ಮುಂಗಡ ಬುಕಿಂಗ್ ಮೂಲಕ ಚಿತ್ರ 50 ಕೋಟಿ ಕ್ಲಬ್‌ಗೆ ಪ್ರವೇಶಿಸಿತು. ಮಲಯಾಳಂ ಚಿತ್ರವೊಂದು ಈ ಸಾಧನೆ ಮಾಡಿರುವುದು ಇದೇ ಮೊದಲು. ಹೊಂಬಾಳೆ ಫಿಲ್ಮ್ಸ್ ಡಿಸ್ಟ್ರಿಬ್ಯೂಟ್ ಮಾಡುತ್ತಿರುವ ಎಂಪುರಾನ್ ಸಿನಿಮಾ ಕರ್ನಾಕಟದಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದಿದ್ದು, ರಿಲೀಸ್ ದಿನದಂದು ಕರ್ನಾಟಕದಲ್ಲಿ 154 ಶೋಗಳು ಫುಲ್ ಆಗಿವೆ. ಇದು ಸಿನಿಮಾಗೆ ಕರ್ನಾಟಕದಲ್ಲಿಯೂ ಸಖತ್ ಡಿಮ್ಯಾಂಡ್ ಬಂದಿದೆ ಎನ್ನುವುದಕ್ಕೆ ಸಾಕ್ಷಿ.
ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಟೋವಿನೋ ಥಾಮಸ್ ಮತ್ತು ಅಭಿಮನ್ಯು ಸಿಂಗ್ ಅಭಿನಯದ ‘ಎಲ್ 2: ಎಂಪುರಾನ್’ ನಲ್ಲಿ ಅಭಿನಯಿಸಿದ್ದಾರೆ.