ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಐಸ್‌ಕ್ರೀಂಗಳನ್ನ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಲ್ಯಾಬ್‌ನಿಂದ ರಿಸಲ್ಟ್ ಬರೋವರೆಗೂ ಸ್ವಲ್ಪ ಐಸ್‌ಕ್ರೀಂ ತಿನ್ನೋದನ್ನು ಅವಾಯ್ಡ್ ಮಾಡಿ.
ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನ ತಪಾಸಣೆ ಮಾಡುತ್ತಾರೆ. ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್‌ಕ್ರೀಂ ಅನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್‌ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಥಣಿಯಲ್ಲಿ ಅನಧಿಕೃತ ಫ್ಯಾಕ್ಟರಿಯಲ್ಲಿ ಕಲರ್ ಕಲರ್ ಐಸ್‌ಕ್ಯಾಂಡಿ ಮಾಡುವುದನ್ನು ಪಬ್ಲಿಕ್ ಟಿವಿ ಬಯಲಿಗೆಳೆದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಐಸ್‌ಕ್ರೀಂ ಟೆಸ್ಟಿಂಗ್‌ಗೆ ಮುಂದಾಗಿದ್ದಾರೆ. ಐಸ್‌ಕ್ರೀಂನಲ್ಲಿ ಕೂಡ ಕೆಮಿಕಲ್ ಕಲರ್ ಬಳಕೆಯಾಗುತ್ತಿದ್ದರೆ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ.
ಜನರು ಕೂಡ ತಾವು ಏನು ತಿನ್ನುತ್ತಿದ್ದೇವೆ ಅಥವಾ ಮಕ್ಕಳಿಗೆ ಏನು ಕೊಡುತ್ತಿದ್ದೇವೆ ಎನ್ನುವ ಬಗ್ಗೆ ಗಮನಹರಿಸಿದರೆ ಆರೋಗ್ಯ ಉಳಿಯುತ್ತದೆ.