ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾಸರಹಳ್ಳಿ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳಲ್ಲಿರುವಂತೆಯೇ ಇತರೆ ಪ್ರದೇಶಗಳಲ್ಲಿರುವ ಸರ್ಕಾರಿ ಪಶು ಆಸ್ಪತ್ರೆ ಆವರಣವನ್ನು ಸಾಕುಪ್ರಾಣಿಗಳ ಚಿತಾಗಾರವಾಗಿ ಬಳಸಬಹುದು ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಸಾಕು ಪ್ರಾಣಿಗಳ ಚಿತಾಗಾರ ಕೊರತೆಯಿಂದಾಗಿ ಸತ್ತ ಪ್ರಾಣಿಗಳನ್ನು ಕಸದ ತೊಟ್ಟಿಯಲ್ಲಿ ಎಸೆಯುವಂತಹ ಬೆಳವಣಿಗೆಗಳು ಕಂಡು ಬರುತ್ತಿವೆ. ಮನುಷ್ಯರಂತೆ ಪ್ರಾಣಿಗಳು ಸತ್ತಾಗ ಕೂಡ ಅವುಗಳಿಗೆ ಗೌರವಯುತ ವಿದಾಯ ಹೇಳಬೇಕು. ಹೀಗಾಗಿ, ಸರ್ಕಾರಿ ಪಶು ಆಸ್ಪತ್ರೆ ಆವರಣವನ್ನು ಸಾಕುಪ್ರಾಣಿಗಳ ಚಿತಾಗಾರವಾಗಿ ಬಳಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.