ಬೆಲೆ ಏರಿಕೆ ಸರದಿ ಇದೀಗ ಇಂಧನ ಇಲಾಖೆಯದ್ದು! ಲಿಫ್ಟ್‌, ಜನರೇಟರ್‌ ತಪಾಸಣೆ ದುಪ್ಪಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬದುಕೋದೆ ದುಬಾರಿ ಎನಿಸುವಂತಾಗಿದೆ. ಹಾಲು, ಮೆಟ್ರೋ, ಹೊಟೇಲ್‌ ಇನ್ನಿತರ ಸರ್ವೀಸ್‌ಗಳು ಬೆಲೆ ಏರಿಕೆಯಾಗಿದ್ದು, ಈ ಬಾರಿ ಬೆಲೆ ಏರಿಕೆ ಸರದಿ ಇಂಧನ ಇಲಾಖೆಯದ್ದಾಗಿದೆ.

ಇತ್ತ ಇಂಧನ ಇಲಾಖೆಯ ಅಡಿಯಲ್ಲಿ ಬರುವ Department of Electrical Inspectorate ನಿಂದ ಪರಿಶೀಲನೆ ಮತ್ತು ಪ್ರತಿ ವರ್ಷ ರಿನೀವಲ್ ಮಾಡುವ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಲಾಗುತ್ತಿದೆ.

ಈ ಹಿಂದೆ ಮೂರು ಮಹಡಿಯ ಮನೆಗೆ ಲಿಫ್ಟ್ ಹಾಕಿಸಿಕೊಂಡಿದ್ದರೆ ಆ ಮನೆಯನ್ನು ಪರಿಶೀಲನೆ ಮಾಡಿ ರಿನೀವಲ್ ಮಾಡಲು 800 ರಿಂದ 1000 ರುಪಾಯಿ ಶುಲ್ಕ ತೆಗೆದುಕೊಳುತ್ತಿದ್ದ ಇಲಾಖೆ, ಈಗ ಆ ದರವನ್ನು 5 ಸಾವಿರ ರೂ.ನಿಂದ 8 ಸಾವಿರ ರೂಪಾಯಿಗೆ ಏರಿಕೆ ಮಾಡುತ್ತಿದೆ.

ಈ ಹಿಂದೆ ಮನೆ, ಕಚೇರಿ, ಫ್ಯಾಕ್ಟರಿಗೆ 25 ಕೆವಿಎ ಟ್ರಾನ್ಸ್​​ಫಾರ್ಮರ್ ಹಾಕಿಸಿಕೊಂಡಿದ್ದರೆ ಅದನ್ನು ಪರಿಶೀಲನೆ ಮಾಡಲು 1300 ರೂ.ನಿಂದ 1500 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!