ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಟೆಂಟ್ ಕ್ರಿಯೇಟರ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿಯೇ ಇರಬೇಕು, ಇದು ಅವರ ಡ್ಯೂಟಿ ಕೂಡ. ಹಾಗಾಗಿ ಅವರು ಹೊಸ ಹೊಸ ಸಬ್ಜೆಕ್ಟ್‌ಗಳನ್ನು ಹುಡುಕಿ ಜನರನ್ನು ಎಂಗೇಜ್ ಮಾಡೋದಕ್ಕೆ ಟ್ರೈ ಮಾಡ್ತಾರೆ.
ಇದೇ ಪ್ರಯತ್ನದಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬರು ಸೆಲೆಬ್ರಿಟಿಗಳು ಮನೆಯ ಮುಂದಿರುವ ಡಸ್ಟ್‌ಬಿನ್‌ಗೆ ಕೈ ಹಾಕಿ ನೋಡಿದ್ದಾರೆ. ಇದರಲ್ಲಿ ಏನೆಲ್ಲಾ ಇದೆ ಎಂದು ಜನರಿಗೆ ತೋರಿಸಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಸಾರ್ಥಕ್ ಸಚ್‌ದೇವ್ ಮುಂಬೈನಲ್ಲಿರುವ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳ ಹೊರಗಿನ ಕಸದ ತೊಟ್ಟಿಗಳಲ್ಲಿ ನಿಜವಾಗಿ ಏನಿದೆ ಎಂದು ಪರಿಶೀಲಿಸುವ ಸವಾಲನ್ನು ಸ್ವೀಕರಿಸಿದ್ದರು. ನಟರಾದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್, ನಟಿ ಶ್ರದ್ಧಾ ಕಪೂರ್ ಮನೆಯ ಮುಂದಿನ ಡಬ್ಬಿಯನ್ನು ತೆಗೆದು ನೋಡಲಾಗಿದೆ.
ಅಕ್ಷಯ್ ಮನೆಯ ಎದುರಿನ ಕಸದ ಡಬ್ಬಿಯಲ್ಲಿ ಎಳನೀರು, ಯಾವುದೋ ಸ್ಕ್ರಿಪ್ಟ್ ಹಾಗೂ ಹಳೆಯ ಅವಾರ್ಡ್ ಒಂದು ಸಿಕ್ಕಿದೆ, ಇನ್ನು ಸಲ್ಮಾನ್ ಮನೆಯ ಎದುರಿನ ಕಸದ ಡಬ್ಬಿಯಲ್ಲಿ ಅಕ್ಕಿಯ ಮೂಟೆ ಚೀಲಗಳು ಕಂಡಿವೆ. ಅಜಯ್ ಮನೆಯ ಎದುರಿನ ಕಸದ ಡಬ್ಬಿಯಲ್ಲಿ ವಿಮಲ್ ಚೀಟಿ, ಚಾಕೋಲೆಟ್ ಕವರ್‌ಗಳು ಕಾಣಿಸಿವೆ. ಶ್ರದ್ಧಾ ಮನೆಯ ಎದುರಿನ ಕಸದ ಡಬ್ಬಿಯಲ್ಲಿ ವರ್ಕಿಂಗ್ ಏರ್ ಪಾಡ್ಸ್ ಸಿಕ್ಕಿದೆ.
View this post on Instagram