ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಬಿಜೆಪಿ ಸರ್ಕಾರವು 2025-26ರ ಮೊದಲ ತ್ರೈಮಾಸಿಕದಲ್ಲಿ ಐದು ಡ್ರೈ ಡೇಗಳನ್ನು ಘೋಷಿಸಿರುವ ಬಗ್ಗೆ ಸಿಎಂ ರೇಖಾ ಗುಪ್ತ ಆದೇಶ ಹೊರಡಿಸಿದ್ದಾರೆ.
2025-26ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಅಂದರೆ ಏಪ್ರಿಲ್ ನಿಂದ ಜೂನ್‌ವರೆಗೆ, ಈ ದಿನಗಳಲ್ಲಿ ಮದ್ಯ ಮಾರಾಟ ಮಾಡಲಾಗುವುದಿಲ್ಲ. ಐದು ಪ್ರಮುಖ ಧಾರ್ಮಿಕ ಸಂದರ್ಭಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಏಪ್ರಿಲ್ 6 ರಂದು ರಾಮ ನವಮಿ ದಿನದಂದು ಡ್ರೈ ಡೇ ಘೋಷಿಸಿದೆ. ಏಪ್ರಿಲ್ 10 ರಂದು ಮಹಾವೀರ ಜಯಂತಿ ಮತ್ತು ಏಪ್ರಿಲ್ 18 ರಂದು ಗುಡ್ ಫ್ರೈಡೇ ದಿನದಂದು ಹಾಗೂ ಇದಲ್ಲದೆ, ಮೇ 12 ರಂದು ಬುದ್ಧ ಪೂರ್ಣಿಮೆ ಮತ್ತು ಜೂನ್ 7 ರಂದು ಬಕ್ರೀದ್ ದಿನವನ್ನು ಸಹ ಒಣ ದಿನವೆಂದು ಘೋಷಿಸಲಾಗಿದೆ.