ಬೇಕಾಗುವ ಸಾಮಗ್ರಿಗಳು:
2-3 ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳು
1/2 ಕಪ್ ಬೆಣ್ಣೆ
1 ಕಪ್ ಸಕ್ಕರೆ
2 ಮೊಟ್ಟೆಗಳು
1 ಟೀಸ್ಪೂನ್ ವೆನಿಲ್ಲಾ ಎಸೆನ್ಸ್
2 ಕಪ್ ಮೈದಾ ಹಿಟ್ಟು
1 ಟೀಸ್ಪೂನ್ ಬೇಕಿಂಗ್ ಸೋಡಾ
1/2 ಟೀಸ್ಪೂನ್ ಬೇಕಿಂಗ್ ಪೌಡರ್
1/2 ಟೀಸ್ಪೂನ್ ದಾಲ್ಚಿನ್ನಿ ಪುಡಿ
1/4 ಟೀಸ್ಪೂನ್ ಉಪ್ಪು
1/2 ಕಪ್ ಹಾಲು
ಬೇಕಿದ್ದರೆ, ಒಣ ಹಣ್ಣುಗಳು ಮತ್ತು ವಾಲ್ನಟ್ಸ್
ಮಾಡುವ ವಿಧಾನ:
ಒಂದು ದೊಡ್ಡ ಬಟ್ಟಲಿನಲ್ಲಿ, ಕರಗಿಸಿದ ಬೆಣ್ಣೆ ಮತ್ತು ಸಕ್ಕರೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮೊಟ್ಟೆಗಳನ್ನು ಒಂದೊಂದಾಗಿ ಸೇರಿಸಿ, ಚೆನ್ನಾಗಿ ಬೀಟ್ ಮಾಡಿ. ವೆನಿಲ್ಲಾ ಎಸೆನ್ಸ್ ಸೇರಿಸಿ ಮಿಶ್ರಣ ಮಾಡಿ. ಬೇರೆ ಬಟ್ಟಲಿನಲ್ಲಿ, ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಬೆಣ್ಣೆ ಮಿಶ್ರಣಕ್ಕೆ ಮೈದಾ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ, ಹಾಲು ಸೇರಿಸುತ್ತಾ ಚೆನ್ನಾಗಿ ಮಿಶ್ರಣ ಮಾಡಿ. ಮ್ಯಾಶ್ ಮಾಡಿದ ಬಾಳೆಹಣ್ಣುಗಳನ್ನು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಬೇಕಿದ್ದರೆ, ಒಣ ಹಣ್ಣುಗಳು ಮತ್ತು ವಾಲ್ನಟ್ಸ್ ಅನ್ನು ಸೇರಿಸಿ ಮಿಶ್ರಣ ಮಾಡಿ. ತಯಾರಿಸಿದ ಕೇಕ್ ಮಿಶ್ರಣವನ್ನು ಕೇಕ್ ಪಾತ್ರೆಗೆ ಹಾಕಿ. ಪ್ರೀಹೀಟ್ ಮಾಡಿದ ಓವನ್‌ನಲ್ಲಿ 30-40 ನಿಮಿಷಗಳ ಕಾಲ ಬೇಯಿಸಿ. ಕೇಕ್ ಚಿನ್ನದ ಬಣ್ಣಕ್ಕೆ ತಿರುಗಿ, ಟೂತ್‌ಪಿಕ್ ಅನ್ನು ಕೇಕ್‌ನ ಮಧ್ಯಕ್ಕೆ ಚುಚ್ಚಿಬೆಂದಿದ್ಯಾ ಎಂದು ನೋಡಿ. ಓವನ್‌ನಿಂದ ಹೊರತೆಗೆದು, ತಣ್ಣಗಾಗಲು ಬಿಡಿ. ಈ ವಿಧಾನವನ್ನು ಅನುಸರಿಸಿ, ರುಚಿಯಾದ ಬಾಳೆಹಣ್ಣಿನ ಕೇಕ್ ಮಾಡಿ ಸವಿಯಿರಿ.