September 30, 2026
Wednesday, September 30, 2026
spot_img

ರಾಜಧಾನಿ ಬೆಂಗಳೂರನ್ನು ಸುತ್ತುವರಿದ ದಟ್ಟ ಮಂಜು, ವಿಮಾನಗಳ ಹಾರಾಟ ವ್ಯತ್ಯಯ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ ಬೆಳ್ಳಂಬೆಳಗ್ಗೆ ದಟ್ಟ ಮಂಜು ಆವರಿಸಿದೆ.

ಇದರ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ದಟ್ಟ ಮಂಜಿನಿಂದಾಗಿ ವಿಸಿಬಿಲಿಟಿ ಕಡಿಮೆ ಆದ ಕಾರಣ, ಹತ್ತಾರು ವಿಮಾನಗಳ ಟೇಕಾಫ್ ನಿಗದಿತ ಸಮಯಕ್ಕಿಂತ ವಿಳಂಬಗೊಂಡಿತು. ಈ ಅನಿರೀಕ್ಷಿತ ವಿಳಂಬದಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಬೆಂಗಳೂರು ಬಿಟ್ಟು ಇನ್ನೆಲ್ಲ ಜಿಲ್ಲೆಗಳಲ್ಲಿ ಒಣಹವೆ ಇದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಚಳಿ ಹಾಗೂ ಮಂಜಿನ ವಾತಾವರಣವಿದ್ದು, ಜನರು ಪರದಾಡುತ್ತಿದ್ದಾರೆ.

Must Read