ಗಗನಯಾನಿ ಸುನಿತಾ ವಿಲಿಯಮ್ಸ್ ಗೆ ‘ಭಾರತ ರತ್ನ’ ನೀಡಿ: TMC ಸಂಸದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಗನಯಾನಿ ಸುನಿತಾ ವಿಲಿಯಮ್ಸ್ ರಿಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕೆಂದು ಟಿಎಂಸಿ ಸಂಸದ ಮೊಹಮ್ಮದ್ ನದಿಮುಲ್ ಹಕ್ ರಾಜ್ಯಸಭೆಯಲ್ಲಿ ಬುಧವಾರ ಒತ್ತಾಯಿಸಿದ್ದಾರೆ.

9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿದ್ದು, ಭೂಮಿಗೆ ಮರಳಿದ ಭಾರತೀಯ ಗಗನಯಾನಿ ಸುನಿತಾ ವಿಲಿಯಮ್ಸ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಯಶಸ್ಸನ್ನು ಸಂಭ್ರಮಿಸಬೇಕು. ವಿಲಿಯಮ್ಸ್ ಅವರ ಗಮನಾರ್ಹ ಸಾಧನೆಗೆ ಗೌರವಪೂರ್ವಕವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ನೀಡಬೇಕೆಂದು’ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿರುವುದನ್ನು ಉಲ್ಲೇಖಿಸಿ, ಸದನದಲ್ಲಿ ಮೊಹಮ್ಮದ್ ಮಾತನಾಡಿದ್ದಾರೆ.

ಕಳೆದ ವರ್ಷ ಜೂನ್‌ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್‌ ಗಗನನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತೆರಳಿದ್ದ ಕ್ರೂ–9 ಮಿಷನ್‌ನ ಸಿಬ್ಬಂದಿ ಸುನಿತಾ ಮತ್ತು ಬುಚ್‌, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು. ಬಳಿಕ ಯಶಸ್ಸುಯಾಗಿ ಹಿಂತಿರುಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!