ಹೊಸದಿಗಂತ ಡಿಜಿಟಲ್ ಡೆಸ್ಕ್:
“ಹೆಣಕ್ಕೂ ಟ್ಯಾಕ್ಸ್ ಹಾಕುವ ಸರ್ಕಾರ” ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ತೆರಿಗೆ ನೀತಿ, ಆರ್ಥಿಕ ನಿರ್ವಹಣೆ ಮತ್ತು ಆಡಳಿತದ ಮೇಲೆ ಹಲವು ಪ್ರಶ್ನೆಗಳನ್ನು ಎತ್ತಿರುವ ಸಿ.ಟಿ. ರವಿ, ರಾಜ್ಯ ಸರ್ಕಾರದ ತೆರಿಗೆ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಜನರ ಮೇಲೆ ಹೊರೆ ಹಾಕುವ ರೀತಿಯಲ್ಲಿ ಎಲ್ಲದಕ್ಕೂ ತೆರಿಗೆ ವಿಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಆರ್ಥಿಕ ನೀತಿಯನ್ನ “ಹಗಲು ದರೋಡೆ” ಎಂದು ವ್ಯಾಖ್ಯಾನಿಸಿದ ರವಿ, “2000 ರೂಪಾಯಿ ಕೊಟ್ಟು ಜನರನ್ನು ಮರುಳುಗೊಳಿಸಿ, ಈಗ ದರೋಡೆ ಮಾಡುತ್ತಿದ್ದಾರೆ” ಎಂದು ಟೀಕಿಸಿದರು. ಜೊತೆಗೆ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. “ಮತ್ತೊಮ್ಮೆ ಸರ್ಕಾರ ಬರುವುದಿಲ್ಲ ಎಂಬ ಭಯದಿಂದ ಹಗಲು ದರೋಡೆಗೆ ಇಳಿದಿದ್ದಾರೆ” ಎಂದು ಹೇಳಿದರು.