ಮಣಿಪುರ ಹಿಂಸಾಚಾರ: ಶಾಂತಿ ಮಾತುಕತೆಗೂ ಮುನ್ನ ಮೂರು ಷರತ್ತು ವಿಧಿಸಿದ ಕುಕಿ-ಝೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನಾಂಗೀಯ ಹಿಂಸಾಚಾರವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ, ಕೇಂದ್ರ ಗೃಹ ಸಚಿವಾಲಯವು ಇಂಫಾಲ್ ಕಣಿವೆಯ ಬಹುಸಂಖ್ಯಾತ ಮೈತೈಗಳು ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಝೋ ಬುಡಕಟ್ಟು ಜನಾಂಗದವರ ನಡುವೆ ಮಾತುಕತೆಗೆ ನಿರ್ಧರಿಸಿದೆ.

ಆದರೆ ಏಪ್ರಿಲ್ 5 ರಂದು ದೆಹಲಿಯಲ್ಲಿ ಕುಕಿ-ಝೋ ಮತ್ತು ಮೈತೈ ಗುಂಪುಗಳ ನಡುವಿನ ಮಾತುಕತೆಗೆ ಮುಂಚಿತವಾಗಿ, ಮಣಿಪುರದ ಕುಕಿ ಗುಂಪುಗಳು ಮೂರು ಪೂರ್ವ-ಷರತ್ತುಗಳನ್ನು ಹಾಕಿಕೊಂಡಿವೆ .

ಮೂರು ಷರತ್ತುಗಳು ಹೀಗಿವೆ:

ಕುಕಿ-ಝೋ ಪ್ರಾಬಲ್ಯದ ಪ್ರದೇಶಗಳಲ್ಲಿ ಮೈತೆಯಿ ವ್ಯಕ್ತಿಗಳ ಚಲನವಲನಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುವುದು.

ಮಾತುಕತೆಗೆ ಅನುಕೂಲವಾಗುವಂತೆ ಕನಿಷ್ಠ ಆರು ತಿಂಗಳ ಕಾಲ ಹಿಂಸಾಚಾರವನ್ನು ನಿಲ್ಲಿಸಬೇಕು.

ಕದನ ವಿರಾಮದ ಅವಧಿಯಲ್ಲಿ ರಚನಾತ್ಮಕ, ಔಪಚಾರಿಕ ಮತ್ತು ಅರ್ಥಪೂರ್ಣ ಸಂವಾದ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!