ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಕಾಂಗ್ರೆಸ್ ಪಕ್ಷದ ತುಷ್ಟೀಕರಣವು ರಾಜಕೀಯ ಶವಪೆಟ್ಟಿಗೆಯಲ್ಲಿ ಕೊನೆಯ ಮೊಳೆಯಾಗಲಿದೆ ಎಂದು ಬಿಜೆಪಿಯ ಅನುರಾಗ್ ಠಾಕೂರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡುತ್ತಾ, ವಕ್ಫ್ ಕಾನೂನಿನಲ್ಲಿನ ತಿದ್ದುಪಡಿ ಭ್ರಷ್ಟಾಚಾರವನ್ನು ನಿಗ್ರಹಿಸಲು ಪ್ರಯತ್ನಿಸುತ್ತದೆ. ವಿರೋಧ ಪಕ್ಷವು ಮತಬ್ಯಾಂಕ್‌ಗಾಗಿ ಸಂವಿಧಾನವನ್ನು ರಾಜಿ ಮಾಡಿಕೊಂಡಿದೆ. ತಿದ್ದುಪಡಿ ಮಸೂದೆ ವಿರೋಧಿಸುವವರು ವಕ್ಫ್ ಕಾನೂನಿಗೆ ಅಂಟಿಕೊಳ್ಳಬೇಕೆ ಅಥವಾ ಸಂವಿಧಾನಕ್ಕೆ ಅಂಟಿಕೊಳ್ಳಬೇಕೆ ಎಂದು ನಿರ್ಧರಿಸಬೇಕು ಎಂದರು.
ಇದು ಪಾಕಿಸ್ತಾನ ಅಥವಾ ತಾಲಿಬಾನ್‌ನ ದೇಶವಲ್ಲ. ನಮ್ಮ ದೇಶದಲ್ಲಿ ಒಂದೇ ಕಾನೂನು- ಸಂವಿಧಾನ ಜಾರಿಯಲ್ಲಿರುತ್ತದೆ . ಇಂದು ನಮ್ಮ ಭೂಮಿಯನ್ನು ‘ಜಿಹಾದ್’ ಹೆಸರಿನಲ್ಲಿ ಮತ್ತೊಮ್ಮೆ ನಾಶವಾಗಲು ಬಿಡುವುದಿಲ್ಲ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.