ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲು ಬೇಗೆಯಿಂದ ಬಚಾವ್ ಆಗಲು 6 ಜನರು ಈಜಲು ಹೋಗಿದ್ದ ವೇಳೆ ಓರ್ವ ಸಾವಿಗೀಡಾದರೆ, ಇನ್ನೊಬ್ಬ ನೀರಲ್ಲಿ ನಾಪತ್ತೆಯಾಗಿರುವ ಘಟನೆ ವಿಜಯಪುರ ತಾಲೂಕಿನ ಕುಮಟಗಿ ಕೆರೆಯಲ್ಲಿ ನಡೆದಿದೆ.
ಜಮಖಂಡಿ ನಿವಾಸಿ ಮಹ್ಮದ್ ಕೈಪ್ ನಿಸಾರ್ ಅಹ್ಮದ್ ಜಮಾದಾರ (19), ಯೋಗಾಪುರದ ಸೋಹೇಲ್ ಹತ್ತರಕಿಹಾಳ (25) ನಾಪತ್ತೆಯಾದ ಯುವಕ.
ಇಲ್ಲಿನ ಯೋಗಾಪುರ ಕಾಲೋನಿಯ 5 ಜನ ಸೇರಿದಂತೆ ಜಮಖಂಡಿಯಿಂದ ಬೀಗರ ಮನೆಗೆ ಬಂದಿದ್ದ ಮಹ್ಮದ್ ಕೈಫ್ ಜಮಾದಾರ್ ಸೇರಿ 6 ಜನ ಯುವಕರು ಕುಮಟಗಿ ಕೆರೆಯಲ್ಲಿ ಈಜಲು ಹೋಗಿದ್ದರು.
ಈ ವೇಳೆ ನಾಲ್ಕು ಯುವಕರು ಈಜಿ ದಡ ಸೇರಿದ್ದಾರೆ. ಇಬ್ಬರ ಪೈಕಿ ಓರ್ವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದು, ಇನ್ನೊಬ್ಬನ ಪತ್ತೆ ಕಾರ್ಯ ಮುಂದು ವರೆದಿದೆ.
ಸ್ಥಳದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ನಾಪತ್ತೆಯಾಗಿರವ ಯುವಕನ ಶೋಧಕಾರ್ಯ ಮುಂದುವರೆಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.