ಐಪಿಎಲ್​ನ ಅಬ್ಬರದ ನಡುವೆ ಟೀಂ ಇಂಡಿಯಾಕ್ಕೆ ತವರಿನಲ್ಲಿ ಮ್ಯಾಚ್ ರೆಡಿ: BCCI ಯಿಂದ ಲಿಸ್ಟ್ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್​ನ ಅಬ್ಬರದ ನಡುವೆ ಬಿಸಿಸಿಐ (BCCI) 2025 ರಲ್ಲಿ ಟೀಂ ಇಂಡಿಯಾ ತನ್ನ ತವರಿನಲ್ಲಿ ಆಡುವ ಸರಣಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಟೀಂ ಇಂಡಿಯಾ 4 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಈ ಸೀಸನ್ ಅಕ್ಟೋಬರ್ 2 ರಿಂದ ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದೆ

ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ
ಭಾರತ ತಂಡದ ದೇಶೀ ಸೀಸನ್ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದ್ದು, ಇದರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಅಕ್ಟೋಬರ್ 2 ರಿಂದ ಅಕ್ಟೋಬರ್ 6 ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಅಕ್ಟೋಬರ್ 10 ರಿಂದ ಅಕ್ಟೋಬರ್ 14 ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ
ಭಾರತ ತಂಡವು ಮೂರು ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಉಭಯ ತಂಡಗಳ ನಡುವೆ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳು ನಡೆಯಲ್ಲಿವೆ. ಎರಡೂ ತಂಡಗಳು 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿವೆ.

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸವು ನವೆಂಬರ್ 14 ರಿಂದ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14 ರಂದು ದೆಹಲಿಯಲ್ಲಿ ನಡೆಯಲಿದೆ. ಎರಡನೇ ಮತ್ತು ಅಂತಿಮ ಪಂದ್ಯವು ನವೆಂಬರ್ 22 ರಿಂದ ಗುವಾಹಟಿಯಲ್ಲಿ ನಡೆಯಲಿದೆ.

ಟೆಸ್ಟ್ ಪಂದ್ಯದ ನಂತರ ಎರಡೂ ತಂಡಗಳ ನಡುವೆ ಏಕದಿನ ಸರಣಿ ನಡೆಯಲಿದೆ. ಏಕದಿನ ಸರಣಿಯಲ್ಲಿ 3 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನವೆಂಬರ್ 30 ರಂದು ರಾಂಚಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 3 ರಂದು ರಾಯ್‌ಪುರದಲ್ಲಿ ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ ಡಿಸೆಂಬರ್ 6 ರಂದು ವೈಜಾಕ್​ನಲ್ಲಿ ನಡೆಯಲಿದೆ.

ಬಳಿಕ ದಕ್ಷಿಣ ಆಫ್ರಿಕಾದ ಭಾರತ ಟಿ20ಐ ಸರಣಿ ನಡೆಯಲಿದ್ದು, .ಡಿಸೆಂಬರ್ 9 ರಿಂದ 19 ರವರೆಗೆ ನಡೆಯಲಿರುವ ಟಿ20ಐ ಸರಣಿಯಲ್ಲಿ ಒಟ್ಟು 5 ಟಿ20ಐ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಡಿಸೆಂಬರ್ 9 ರಂದು ಕಟಕ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 11 ರಂದು ನವದೆಹಲಿಯಲ್ಲಿ ನಡೆಯಲಿದೆ. ಮೂರನೇ ಪಂದ್ಯ ಡಿಸೆಂಬರ್ 14 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ಡಿಸೆಂಬರ್ 17 ರಂದು ಲಕ್ನೋದಲ್ಲಿ ನಡೆಯಲಿದೆ. ಐದನೇ ಮತ್ತು ಅಂತಿಮ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!