ಹೊಸದಿಗಂತ ವರದಿ, ವಿಜಯಪುರ:
ಕರ್ತವ್ಯ ಲೋಪ, ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ಹಿನ್ನೆಲೆ ಪ್ರಭಾರಿ ಮುಖ್ಯ ಶಿಕ್ಷಕಿ ಹಾಗೂ ಇಬ್ಬರು ಸಹ ಶಿಕ್ಷಕಿಯರನ್ನು ಅಮಾನತುಗೊಳಿಸಿ ವಿಜಯಪುರ ನಗರ ವಲಯ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಆದೇಶಿಸಿದ್ದಾರೆ.
ವಿಜಯಪುರದ ಕೆಜಿಎಸ್ ನಂಬರ 2ರ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಎನ್.ಎಂ. ಅಣ್ಣೆಪ್ಪನವರ, ಸಹ ಶಿಕ್ಷಕಿಯರಾದ ಆರ್.ಎಂ. ಹೋಳಿನ, ಸಿ.ಎಸ್. ಮೈತ್ರಿ ಅಮಾನತುಗೊಂಡಿದ್ದಾರೆ.