ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬೆಂಬಲ ಸೂಚಿಸಿದ್ದಾರೆ.
ವಕ್ಫ್ ಬೋರ್ಡ್‌ನ ಆಸ್ತಿ 1.2 ಲಕ್ಷ ಕೋಟಿ ರೂ. ಬೆಲೆ ಬಾಳುತ್ತದೆ. ಈ ಆಸ್ತಿಯನ್ನು ದಾನಿಗಳು ನೀಡಿದ್ದು, ಇದು ದುರ್ಬಳಕೆ ಆಗದಂತೆ ಪ್ರಧಾನಿ ಮೋದಿಯವರು ತಡೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ದಾನದ ಆಸ್ತಿ ಉಳ್ಳವರ ಪಾಲಾಗದಂತೆ ಕಾಪಾಡಲು ಪ್ರಧಾನಿ ಮುಂದಾಗಿದ್ದಾರೆ. ಈ ಆಸ್ತಿಯನ್ನು ಸರ್ಕಾರ ನೀಡಿಲ್ಲ. ದಾನಿಗಳು ನೀಡಿದ ದಾನ ದುರ್ಬಳಕೆಯಾಗಬಾರದು ಎಂದಿದ್ದಾರೆ.
ದೇವರನ್ನು ನನ್ನ ಸ್ನೇಹಿತ ಅಲ್ಹಾ ಅಂತಾರೆ, ನಾನು ರಾಮ ಎನ್ನುತ್ತೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿವನು. ತಿರುಪತಿ, ಅಜ್ಮೀರ್ ದರ್ಗಾ, ಗೊಲ್ಡನ್ ಟೆಂಪಲ್‌ಗೆ ಹೋಗುತ್ತೇನೆ. ಜೀವನದಲ್ಲಿ ಕೆಲವು ಸಿದ್ಧಾಂತ ಇಟ್ಟುಕೊಂಡಿದ್ದೇನೆ. ವಕ್ಫ್ ಮಸೂದೆ ಮತ್ತು ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.