ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲಿಸಿದ್ದರಿಂದ ಬೇಸರಗೊಂಡು ಕೆಲ ಮುಸ್ಲಿಂ ನಾಯಕರು ಪಕ್ಷ ತೊರೆದಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಗುಲಾಮ್ ರಸೂಲ್ ಬಲಿಯಾವಿ, ವಿಧಾನ ಪರಿಷತ್ ಸದಸ್ಯ ಗುಲಾಮ್ ಗೌಸ್, ಮೊಹಮ್ಮದ್ ತಬ್ರೇಜ್ ಸಿದ್ದಿಕಿ, ಮುಖಂಡ ಮೊಹಮ್ಮದ್ ಕಾಸೀಂ ಅನ್ಸಾರಿ ಜೆಡಿಯು ತೊರೆದಿರುವ ಪ್ರಮುಖರು.
ಪಕ್ಷ ತೊರೆದಿದ್ದಕ್ಕೆ ಪ್ರತಿಕ್ರಿಯಿಸಿದ ಜೆಡಿಯು ನಾಯಕರು ಕೆಲ ಮುಸ್ಲಿಂ ಮುಖಂಡರು ಪಕ್ಷ ತೊರೆದಿದ್ದು, ಈ ಬೆಳವಣಿಗೆಯು ಪಕ್ಷದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲಎಂದು ಹೇಳಿದ್ದಾರೆ.