ಪತ್ನಿ ಮಾತಿಗೆ ಡೋಂಟ್ ಕೇರ್: PUBG ಗೇಮ್ ನ ಚಟಕ್ಕೆ ಬಿದ್ದು ಯುವಕ ಸೂಸೈಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬಿಹಾರದಲ್ಲಿ ಪಬ್‌ಜಿ ಗೇಮ್​ನ ವ್ಯಸನ‌ಕ್ಕೆ ಮತ್ತೊಂದು ಜೀವ ಬಲಿಯಾಗಿದ್ದು, PUBG ಆಟವಾಡುವುದನ್ನು ನಿಲ್ಲಿಸಿದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಾಟ್ನಾದ ಅಗಮ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

25 ವರ್ಷದ ವಿಕಾಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ.

ವಿಕಾಶ್ ಮತ್ತು ಅವರ ಮನಿತಾ ಕಳೆದ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಇಬ್ಬರೂ ಪಾಟ್ನಾ ನಗರದ ಗುಡ್ಡಗಾಡು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪಬ್‌ಜಿ ಗೇಮ್​ನ ವ್ಯಸನಿಯಾಗಿದ್ದ ವಿಕಾಶ್, ಕಳೆದ ಕೆಲವು ತಿಂಗಳುಗಳಿಂದ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ PUBG ನಲ್ಲಿ ಹೆಚ್ಚು ಕಾಲ ಕಳೆಯಲು ಶುರು ಮಾಡಿದ್ದ. ಈ ಆಟದ ಮೂಲಕ ಹಣ ಗಳಿಸಲು ಯತ್ನಿಸುತ್ತಿದ್ದದ್ದು ನಮ್ಮ ಗಮನಕ್ಕೂ ಬಂದಿತ್ತು.

ಪಬ್‌ಜಿ ಆಟ ಆಡುವುದನ್ನು ಬಿಟ್ಟು ಕೆಲಸ ಹುಡುಕುವಂತೆ ಪತ್ನಿ ಮನಿತಾ ಪದೇ ಪದೆ ಸಲಹೆ ನೀಡಿದ ಹೊರತಾಗಿಯೂ ಅದರಿಂದ ಹೊರ ಬಂದಿರಲಿಲ್ಲ. ಬುಧವಾರ ರಾತ್ರಿ ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಿಟ್ಟಿನಲ್ಲಿ ಮನಿತಾ ಚಿಕ್ಕಪ್ಪನ ಮನೆಗೆ ಹೋಗಿದ್ದಳು. ಮನೆಯಲ್ಲಿ ವಿಕಾಶ್ ಒಬ್ಬನೇ ಇದ್ದ. ಈ ವೇಳೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಕ್ಕ-ಪಕ್ಕದ ಜನ ಮಾತನಾಡಿಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಇದು ಗೇಮಿಂಗ್ ಚಟ ಮತ್ತು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವೆಂದು ಪರಿಗಣಿಸಲಾಗಿದೆ. ದೂರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!