ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನೀವು ಬೇಡ ಅಂದರೂ ನಾವು ಒಳ ಮೀಸಲಾತಿ ಜಾರಿ ಮಾಡ್ತೀವಿ. ಬಡ್ತಿ ಮೀಸಲಾತಿ ಮಾಡುತ್ತಿಲ್ಲ. ಒಂದು ವೇಳೆ ಮಾಡಿದ್ರು ಅದನ್ನು ನಿಲ್ಲಿಸುತ್ತೇವೆ. ಉದ್ಯೋಗ ನೇಮಕಾತಿ ಎಲ್ಲವನ್ನೂ ನಿಲ್ಲಿಸಿದ್ದೇವೆ, ನಾವು ವೈಜ್ಞಾನಿಕವಾಗಿ ಜಾರಿ ಮಾಡಬೇಕಿದೆ. ಎರಡು ತಿಂಗಳ ಸಮಯ ತೆಗೆದುಗೊಂಡು ಸೂಕ್ತ ತೀರ್ಮಾನ ಮಾಡ್ತೀವಿ ಎಂದು ಆಯೋಗ ಹೇಳಿದೆ ಎಂದು ಹೇಳಿದ್ದಾರೆ.