ಹೊಸದಿಗಂತ ಹಾಸನ :
ಚೌಕಬಾರ ಆಡುತ್ತಿದ ವೇಳೆ ನಡೆದ ಗಲಾಟೆ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಲಕ್ಕಪ್ಪ (48) ,ಕೊಲೆಯಾದ ವ್ಯಕ್ತಿ. ಬಸವರಾಜ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ. ಬಸವರಾಜ ಈ ವೇಳೆ ವಸಂತ್, ಶಶಿ, ಲಕ್ಕಪ್ಪ ಎಂಬ ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಲಕ್ಕಪ್ಪನಿಗೆ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಶಶಿ,ವಸಂತ ಎಂಬುವವರಿಗೆ ಬೆನ್ನು, ಕೈ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.
ಶಶಿ, ವಸಂತ ಚೌಕಬರೆ ಆಡುತ್ತಿದ್ದಾಗ ಬಸವರಾಜ ಜಗಳ ತೆಗೆಡಿದ್ದಾನೆ. ಶಶಿ, ವಸಂತ ಮೇಲೆ ಹಲ್ಲೆ ಮಾಡುತ್ತಿದ್ದ ಬಸವರಾಜನ ಜಗಳ ಬಿಡಿಸಲು ಬಂದಾಗ ಬಸವರಾಜ ಲಕ್ಕಪ್ಪಗೆ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿ ದ್ದಾನೆ. ಬಸವರಾಜ ಜೊತೆಗಿದ್ದ ನಂಜುಂಡಿ ಎಂಬಾತ ಹಲ್ಲೆಗೆ ಬೆಂಬಲ ನೀಡಿದ್ದಾನೆ ಎನ್ನಲಾಗಿದ್ದು, ಬಸವರಾಜ, ನಂಜುಂಡಿ ತಲೆ ಮರೆಸಿಕೊಂಡಿದ್ದಾರೆ.
ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.