ತುಕ್ಪಾ ಒಂದು ಟಿಬೆಟಿಯನ್ ಮೂಲದ ರುಚಿಕರವಾದ ಮತ್ತು ಪೋಷಕಾಂಶ ತುಂಬಿರುವ ನೂಡಲ್ಸ್ ಸೂಪ್. ತುಕ್ಪಾ ವಿಭಿನ್ನ ತರಕಾರಿಗಳು, ನೂಡಲ್ಸ್ ಮತ್ತು ಮಸಾಲೆಗಳ ಸಂಯೋಜನೆಯಿಂದ ತಯಾರಾಗಿ, ಆರೋಗ್ಯಕರವಾದ ಹಾಗೂ ಸವಿಯಲು ತೃಪ್ತಿಕರವಾದ ಆಹಾರವಾಗಿದೆ. ಈ ತುಕ್ಪಾ ಸೂಪ್ಅನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ – 2 ಟೀಸ್ಪೂನ್
ಬೆಳ್ಳುಳ್ಳಿ – 4-5 ಎಸಳು
ಶುಂಠಿ – 1 ಟೀಸ್ಪೂನ್
ಈರುಳ್ಳಿ – 1
ಕ್ಯಾರಟ್ – 1
ಕ್ಯಾಪ್ಸಿಕಂ – 1/2
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಪುದೀನಾ/ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಪೆಪ್ಪರ್ ಪುಡಿ – 1/2 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಟೊಮೆಟೋ ಸಾಸ್ – 1 ಟೀಸ್ಪೂನ್
ಬೇಯಿಸಿದ ನೂಡಲ್ಸ್ – 1 ಕಪ್
ನೀರು – 2 ಕಪ್
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಸ್ವಲ್ಪ ಹುರಿದುಕೊಳ್ಳಿ. ನಂತರ ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಹಾಕಿ ಸ್ವಲ್ಪ ಬೇಯಿಸಿ. ನಂತರ ನೀರು ಸೇರಿಸಿಕೊಳ್ಳಿ. ಕುದಿ ಬಂದ ಮೇಲೆ ಉಪ್ಪು, ಪೆಪ್ಪರ್ ಪುಡಿ, ಸೋಯಾ ಸಾಸ್ ಮತ್ತು ಟೊಮೆಟೋ ಸಾಸ್ ಹಾಕಿ ಚೆನ್ನಾಗಿ ಮತ್ತೊಮ್ಮೆ ಕುದಿಸಿ. ಈಗ ಬೇಯಿಸಿದ ನೂಡಲ್ಸ್ ಸೇರಿಸಿ 2-3 ನಿಮಿಷ ಕುದಿಸಿ, ಕೊನೆಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಉದುರಿಸಿದರೆ ತುಕ್ಪಾ ರೆಡಿ.