ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿನಕ್ಕೊಂದು ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರ ಸ್ಮಾರ್ಟ್ ಮೀಟರ್‌ಗಳನ್ನೇ ಬಿಟ್ಟಿಲ್ಲ, ಇನ್ನೂ ಕಸವನ್ನ ಬಿಡ್ತಾರಾ ಇವ್ರು? ಇನ್ನೂ ಬಿಟ್ರೆ ಪೋಸ್ಟ್ ಮಾರ್ಟಂಗೂ ದರ ವಿಧಿಸ್ತಾರೆ ಆಗ ಜನ ಸಾಯೋದಕ್ಕೂ ಹಿಂಜರಿಯುತ್ತಾರೆ, ಸುಳ್ಳು ಆರೋಪ ಮಾಡಿ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ ಎಂದು ಲೇವಡಿ ಮಾಡಿದ್ದಾರೆ.