ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ನಡೆದ ಶತ್ರು ಸಂಹಾರ ಯಾಗಕ್ಕೂ ಸಿದ್ದರಾಮಯ್ಯನವರ ಕಾಲು ಸಮಸ್ಯೆಗೂ ಲಿಂಕ್ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದ ಮಹಾ ನಾಯಕರು ಕೇರಳಕ್ಕೆ ಹೋಗಿ ಶತ್ರು ಸಂಹಾರ ಪೂಜೆಯನ್ನು ಮಾಡಿಸಿದ ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಕಾಲು ನೋವು ಕಾಣಿಸಿಕೊಂಡಿದೆ. ಅದೇ ರೀತಿ ನನ್ನ ಮೇಲೆಯೂ ಕೂಡ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯತ್ನಾಳ ಸಂಹಾರ ಪೂಜೆ ನಡೆದಿದೆ. ಆದರೆ ಅದರಿಂದ ನನಗೆ ಏನೂ ಆಗಲ್ಲ ಎಂದರು.
ಹಿಂದೆ ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿಯೂ ಕೂಡ ನನ್ನ ಸಂಹಾರ ಪೂಜೆ ಆಗಿದೆ. ಪೂಜೆ ಮಾಡಿಸಿದ್ದು ಯಾರೆಂಬುದು ನನಗೆ ಗೊತ್ತಿದೆ. ನನಗೆ ಯಾವ ಪ್ರಭಾವವೂ ಬೀರದ ಕಾರಣ ನಾನು ಈಗ ಮಾತನಾಡುತ್ತಿದ್ದೇನೆ ಎಂದರು.