ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋಗಳಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಕಾಮನ್ಸೆನ್ಸ್ ಹೆಚ್ಚಿನ ಮಂದಿಗೆ ಇರುತ್ತದೆ. ಆದರೆ ಇಲ್ಲೊಬ್ಬ ಯುವಕ ರೂಲ್ಸ್ ಫಾಲೋ ಮಾಡಿಲ್ಲ, ರೂಲ್ಸ್ ಇರಲಿ ಕಾಮನ್ ಸೆನ್ಸ್ ಕೂಡ ಅಪ್ಲೇ ಮಾಡದೇ ಕುಳಿತಲ್ಲಿಯೇ ಎಣ್ಣೆ ಹೊಡೆದಿದ್ದಾನೆ.
ದೆಹಲಿ ಮೆಟ್ರೋದಲ್ಲಿ ಎಣ್ಣೆ ಕೂಡ ಕುಡೀಬಹುದಾ? ಈ ವಿಡಿಯೋ ನೋಡಿದ ಎಂತಹವರಿಗೂ ಈ ಪ್ರಶ್ನೆ ಕಾಡದೇ ಇರೋದಿಲ್ಲ. ವ್ಯಕ್ತಿಯೊಬ್ಬ ಎಣ್ಣೆ ಹೊಡೀತಾ, ಮೊಟ್ಟೆ ತಿನ್ನುತ್ತಾ ಪ್ರಯಾಣ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೆಟ್ರೋದಲ್ಲೇ ಎಣ್ಣೆ ಬಾಟಲಿ ಓಪನ್ ಮಾಡಿರೋ ಆಸಾಮಿ ಮೊದಲಿಗೆ ಪೆಗ್ ಮಾಡ್ಕೊಂಡು ಕುಡಿದಿದ್ದಾನೆ. ನಂತರ ಮತ್ತೊಂದು ಪೆಗ್ ಹೀರಿದ್ದಾನೆ. ಎಣ್ಣೆ ಹೊಡೆಯುತ್ತಾ ಮೊಟ್ಟೆ ತಿನ್ನುವ ಯುವಕ ಬಾಯಿಲ್ಡ್ ಎಗ್ನ ಸಿಪ್ಪೆ ಸುಲಿಯಲು ಟ್ರೇನ್ನ ರಾಡ್ ಅನ್ನೇ ಬಳಸಿದ್ದಾನೆ.
ದೆಹಲಿ ಮೆಟ್ರೋದಲ್ಲಿ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಹೋಗಬಹುದು. ಆದ್ರೆ ಮೆಟ್ರೋ ರೈಲಿನಲ್ಲಿ ಮದ್ಯವನ್ನ ಸೇವಿಸುವಂತಿಲ್ಲ. ಮದ್ಯ ಸೇವಿಸಿ ಮೆಟ್ರೋನಲ್ಲಿ ಪ್ರಯಾಣವೂ ಮಾಡುವ ಹಾಗಿಲ್ಲ. ಅಷ್ಟೇ ಅಲ್ಲ ದೆಹಲಿ ಮೆಟ್ರೋನಲ್ಲಿ ಊಟ, ಆಹಾರ ಸೇವನೆಯೂ ಬ್ಯಾನ್ ಆಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದ್ರೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ.
DMRC : दिल्ली NCR की लाइफ लाइन कही जाने वाली दिल्ली मेट्रो में युवक द्वार पैग (शराब जैसा पदार्थ) पीते और उबले अड़े को छील कर खाते का वीडियो हो रहा है वायरल #DMRC #ViralVideos #alcohol pic.twitter.com/XyoWlq75LV
— Abhishek Nayan (ABP News) (@Abhisheknayan81) April 7, 2025