ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಅಪಹಾಸ್ಯ ಮಾಡಿದ ಕಾರಣಕ್ಕೆ ಕುನಾಲ್ ಕಾಮ್ರಾ ಕಾರ್ಯಕ್ರಮಗಳನ್ನು ‘ಬುಕ್ ಮೈ ಶೋ’ ಸಂಸ್ಥೆ, ತನ್ನ ಪಟ್ಟಿಯಿಂದ ಕೈಬಿಟ್ಟಿದೆ.
ಇದಕ್ಕೆ ಕುನಾಲ್ ಕಾಮ್ರಾ ಬಹಿರಂಗ ಪತ್ರ ಬರೆದಿದ್ದು, ನನ್ನ ಕಾರ್ಯಕ್ರಮಗಳು ‘ಬುಕ್ ಮೈ ಶೋ’ದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ವೀಕ್ಷಕರ ದೃಷ್ಟಿಯಿಂದ ಯಾವುದೇ ಖಾಸಗಿ ಕಾರ್ಯಕ್ರಮ ಬಹಿಷ್ಕಾರ ಮಾಡಲು ಅಥವಾ ಕುಗ್ಗಿಸಲು ನಾನು ಇಷ್ಟಪಡುವುದಿಲ್ಲ. ವ್ಯವಹಾರಕ್ಕೆ ಒಳಿತಾಗುವ ಕಾರ್ಯವನ್ನು ತನ್ನ ಹಕ್ಕಿನ ಪರಿಮಿತಿಯೊಳಗೆ ಸಂಸ್ಥೆ ಮಾಡಿದೆ. ಎಂದು ಕುನಾಲ್ ‘ಎಕ್ಸ್’ ಮತ್ತು ಇನ್‌ಸ್ಟಾ ದಲ್ಲಿ ಪೋಸ್ಟ್ ಮಾಡಿದ್ದಾರೆ.
ಬುಕ್ ಮೈ ಶೋಗೆ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಮುಂಬೈ ಮನರಂಜನಾ ಕಾರ್ಯಕ್ರಮಗಳ ಪ್ರಮುಖ ಕೇಂದ್ರ ಎಂಬುದು ಅವರಿಗೆ ಗೊತ್ತಿದೆ. ಸರ್ಕಾರದ ಸಹಕಾರವಿಲ್ಲದೆ ಕೋಲ್ಡ್‌ಪ್ಲೇ ಮತ್ತು ಗನ್ಸ್ ಎನ್ ರೋಸೆಸ್ ನಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕುನಾಲ್ ಕಾರ್ಯಕ್ರಮಗಳನ್ನು ಕೈಬಿಡುವಂತೆ ಶೀವಸೇನಾ ನಾಯಕರು ‘ಬುಕ್ ಮೈ ಶೋ’ನ ಸಂಸ್ಥೆಗೆ ಪತ್ರ ಬರೆದಿದ್ದರು. ಆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಕಾಮ್ರಾ ಪತ್ರದ ಕುರಿತು ಬುಕ್ ಮೈ ಶೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.