ವಿಜ್ಞಾನ ಭವನದಲ್ಲಿ ‘ನವಕರ್ ಮಹಾಮಂತ್ರ’ ಪಠಿಸಿದ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನವಕರ್ ಮಹಾಮಂತ್ರ ದಿವಸ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು. ಅಲ್ಲಿ ಅವರು ಪವಿತ್ರ ಜೈನ ಮಂತ್ರ ‘ನವಕರ್ ಮಹಾಮಂತ್ರ’ವನ್ನು ಪಠಿಸಿದ್ದಾರೆ.

X ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿಯವರು, ಬೆಳಿಗ್ಗೆ 8:27 ಕ್ಕೆ ನಾಗರಿಕರು ಒಟ್ಟಾಗಿ ಸೇರಿ ಪವಿತ್ರ ಜೈನ ಮಂತ್ರವನ್ನು ಪಠಿಸುವಂತೆ ಮನವಿ ಮಾಡಿದರು.

“ಬನ್ನಿ, ನಾವೆಲ್ಲರೂ ಬೆಳಿಗ್ಗೆ 8:27 ಕ್ಕೆ ನವಕರ ಮಹಾಮಂತ್ರವನ್ನು ಒಟ್ಟಾಗಿ ಜಪಿಸೋಣ. ಪ್ರತಿಯೊಂದು ಧ್ವನಿಯೂ ಶಾಂತಿ, ಶಕ್ತಿ ಮತ್ತು ಸಾಮರಸ್ಯವನ್ನು ತರಲಿ. ಸಹೋದರತ್ವ ಮತ್ತು ಒಗ್ಗಟ್ಟಿನ ಮನೋಭಾವವನ್ನು ಹೆಚ್ಚಿಸಲು ನಾವೆಲ್ಲರೂ ಒಗ್ಗೂಡೋಣ” ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ, ಶಾಂತಿ, ಆಂತರಿಕ ಶಕ್ತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ನಾಗರಿಕರು ಒಗ್ಗಟ್ಟಿನಿಂದ ಮಂತ್ರವನ್ನು ಜಪಿಸುವಂತೆ ಪ್ರೋತ್ಸಾಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!