ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪವನ್ ಕಲ್ಯಾಣ್ ಕಿರಿಯ ಪುತ್ರ ಸಿಂಗಾಪುರದ ಶಾಲೆಯೊಂದರಲ್ಲಿ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತೆರಳಿದ್ದು, ಮಗನ ಆರೋಗ್ಯ ನೋಡಿದ್ದಾರೆ.
ನಾನು ಅಂದುಕೊಂಡದ್ದಕ್ಕಿಂತ ಹೆಚ್ಚೇ ಡ್ಯಾಮೇಜ್ ಆಗಿದೆ. ಆತನ ಕೈ-ಕಾಲಿಗೆ ಸುಟ್ಟ ಗಾಯಗಳಾಗಿವೆ. ಇನ್ನು ಶ್ವಾಸಕೋಶಕ್ಕೂ ತೊಂದರೆ ಆಗಿದೆ ಎಂದು ಹೇಳಿದ್ದಾರೆ. ಮಾರ್ಕ್ ಶಂಕರ್ ಜೊತೆ ಇತರ ವಿದ್ಯಾರ್ಥಿಗಳೂ ಇದ್ದರು ಎಂದು ಪವನ್ ಕಲ್ಯಾಣ್ ಅವರು ಹೇಳಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಸ್ಯೆ ಆಗಿದೆ ಎಂದು ಪವನ್ ಕಲ್ಯಾಣ್ ಅವರು ಹೇಳಿದ್ದಾರೆ.
ಶಂಕರ್ ಕಾಲು ಹಾಗೂ ಕೈಗೆ ಸುಟ್ಟ ಗಾಯಗಳಾಗಿವೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಆಗಿದೆ. ಅವನ ಶ್ವಾಸಕೋಶವನ್ನು ಸರಿಪಡಿಸಲು ಬ್ರಾಂಕೋಸ್ಕೋಪಿ ಮಾಡಲಾಗಿದೆ. ಅವನ ದೇಹಕ್ಕೆ ಸಾಕಷ್ಟು ಹೊಗೆ ಸೇರಿದೆ. ನನ್ನ ಮಗನ ಮುಂದೆ ಕುಳಿತಿದ್ದ ಮತ್ತೋರ್ವನಿಗೆ ಇನ್ನೂ ಸಾಕಷ್ಟು ಗಾಯಗಳು ಆಗಿವೆ. ಮತ್ತೋರ್ವ ನಿಧನ ಹೊಂದಿದ್ದಾನೆ’ ಎಂದು ಪವನ್ ಕಲ್ಯಾಣ್ ಮಾಹಿತಿ ನೀಡಿದ್ದಾರೆ.